ಬಿಹಾರದಲ್ಲಿ ಸಂಗೀತ ಕಾರ್ಯಕ್ರಮದ ವೇಳೆ ಛಾವಣಿ ಕುಸಿದ ಪರಿಣಾಮ ನೂರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವ ಘಟನೆ ಬಿಹಾರದ ಛಪ್ರಾದ ಇಸುಪಾರ್‌ನಲ್ಲಿ ನಡೆದಿದೆ.
ಛಪ್ರಾದ ಇಸುಪಾರ್‌ನ ಮಹಾವೀರ ಮೇಳದ ವೇಳೆ ಈ ಘಟನೆ ನಡೆದಿದ್ದು, ಈ ವೇಳೆ ಕಾರ್ಯಕ್ರಮವನ್ನು ನೋಡಲು ಸಾವಿರಾರು ಜನ ಪಾಲ್ಗೊಂಡಿದ್ದರು.
ಜನರು ರಸ್ತೆಯ ಉದ್ದಕ್ಕೂ ಬಾಲ್ಕನಿಗಳು, ಮರಗಳು ಮತ್ತು ಕಟ್ಟಡದ ಛಾವಣಿಗಳನ್ನೇರಿ ಸಂಗೀತ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದು, ಈ ವೇಳೆ ತೂಕ ಹೆಚ್ಚಾದ ಪರಿಣಾಮ ಛಾವಣಿ ಏಕಾಏಕಿ ಕುಸಿದಿದೆ.
The roof collapsed in Chapra, Bihar, injuring 100 people.#Bihar #Chhapra #RoofCollapse @bihar_police @officecmbihar @ChapraZila pic.twitter.com/PvBT1mno4d
— Payal Mohindra (@payal_mohindra) September 4, 2024
ಛಾವಣಿ ಕುಸಿಯುತ್ತಿದ್ದಂತೆ ಜನರು ಕಿರುಚುತ್ತಾ ಓಡಿಹೋಗುವ ಮೂಲಕ ಕಾಲ್ತುಳಿತದಂತಹ ಪರಿಸ್ಥಿತಿ ಸಂಭವಿಸಿದೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುಮಾರು 10 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.