Friday, April 25, 2025
Homeಟಾಪ್ ನ್ಯೂಸ್TAMIL NADU: ಕಾವೇರಿ ದಡದಲ್ಲಿ ರಾಕೆಟ್​ ಲಾಂಚರ್​ ಪತ್ತೆ

TAMIL NADU: ಕಾವೇರಿ ದಡದಲ್ಲಿ ರಾಕೆಟ್​ ಲಾಂಚರ್​ ಪತ್ತೆ

ಚೆನ್ನೈ: ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ದೇವಸ್ಥಾನದ ಬಳಿ ಇರುವ ಕಾವೇರಿ ನದಿಯ ದಡದಲ್ಲಿ ರಾಕೆಟ್​ ಲಾಂಚರ್​ ಪತ್ತೆಯಾಗಿದೆ.

 ಅಂದನಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು ದಡದ ಬಳಿ ತೆರಳಿದ್ದರು. ಈ ವೇಳೆ ರಾಕೆಟ್‌ ಲಾಂಚರ್‌ ಅನ್ನು ಹೋಲುವ ತಿಳಿ ನೀಲಿ ಮತ್ತು ಕಪ್ಪು ಲೋಹದ ವಸ್ತು ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಭಕ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ರಾಕೆಟ್​ ಲಾಂಚರ್​ ಅನ್ನು ವಸ್ತುವನ್ನು ಭದ್ರಪಡಿಸಿ ಭಾರತೀಯ ಸೇನೆ 117 ಪದಾತಿ ದಳದ ಬೆಟಾಲಿಯನ್​ಗೆ ಹಸ್ತಾಂತರಿಸಿದ್ದಾರೆ. ಘಟನೆಗೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ರಾಕೆಟ್ ಲಾಂಚರ್‌ನ ಮೂಲ ಮತ್ತು ಅದು ಹೇಗೆ ನದಿಯ ದಡದಲ್ಲಿ ಪತ್ತೆ ಆಗಿದೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಹೆಚ್ಚಿನ ಸುದ್ದಿ

error: Content is protected !!