ಬೆಂಗಳೂರು: ಬೆಂಗಳೂರು ದೇಶದ ಅತಿ ಹೆಚ್ಚು ಮೌಲ್ಯಯುತವಾದ ವಸತಿ ಕ್ಷೇತ್ರ ಮಾರುಕಟ್ಟೆಯಲ್ಲೊಂದು. ಬೆಂಗಳೂರಿನಲ್ಲಿ ವರ್ಷದ ಆರಂಭದಿಂದ ಮುಂಬೈಗಿಂತ ಇಲ್ಲಿ ಬಾಡಿಗೆ ದರವು ದುಪ್ಪಟ್ಟಾಗಿದೆ. ಸಾಮಾನ್ಯವಾಗಿ ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು ನಗರದ ಭೂಮಾಲೀಕರು ಈಗ ತಮ್ಮ ಆಸ್ತಿ ಮೌಲ್ಯದ ಬಾಡಿಗೆಯನ್ನು ದ್ವಿಗುಣದಷ್ಟು ಹೆಚ್ಚು ಮಾಡಿದ್ದಾರೆ, ಇದು ಆರ್ಥಿಕ ಕೇಂದ್ರವಾದ ಮುಂಬೈಯನ್ನು ಮೀರಿಸುತ್ತದೆ ಎಂದು ಮಾರುಕಟ್ಟೆ ಸಂಶೋಧಕರು ವರದಿಯೊಂದರಲ್ಲಿ ಪಕ್ರಟಿಸಿದ್ದಾರೆ.
ರಾಜ್ಯ ರಾಜಧಾನಿಯು 1.5 ಮಿಲಿಯನ್‌ಗಿಂತಲೂ ಹೆಚ್ಚು ಉದ್ಯೋಗಿಗಳಿಗೆ ನೆಲೆಯಾಗಿದೆ. ಐಟಿ ಬಿಟಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಾಂಕ್ರಾಮಿಕ ಸಮಯದಲ್ಲಿ ಮನೆಯಿಂದ ಕೆಲಸ ಮಾಡುವ ಆವಕಾಶವನ್ನು ನೀಡಿತ್ತು. ಇದರಿಂದ ಉದ್ಯೋಗಿಗಳು ನಗರ ತೊರೆದು ತಮ್ಮ ಊರುಗಳಿಗೆ ಹಿಂತಿರುಗಿದ್ದರು. ಪರಿಣಾಮ ಆ ಸಂದರ್ಭದಲ್ಲಿ ನಗರದಲ್ಲಿ ಮನೆಗಳ ಬಾಡಿಗೆ ಕಡಿಮೆ ಆಗಿತ್ತು.
ಬೆಂಗಳೂರಿನ ಆರ್ಥಿಕತೆ ಮತ್ತು ಖಾಸಗಿ ವಲಯವು ಚೇತರಿಸಿಕೊಳ್ಳುತ್ತಿದ್ದಂತೆ, ಭೂಮಾಲೀಕರು ಕಳೆದುಹೋದ ಆದಾಯವನ್ನು ಮರುಪಡೆಯಲು ಮತ್ತು ಮಾರಾಟಗಾರರ ಮಾರುಕಟ್ಟೆಯಲ್ಲಿ ತಮ್ಮ ಆಸ್ತಿ ಮೌಲ್ಯವನ್ನು ಹೆಚ್ಚಿಸಿದ್ದಾರೆ.
2019ರಿಂದ ಬಾಡಿಗೆ ಏರಿಕೆ
ಬೆಂಗಳೂರಿನ ನೆರೆಹೊರೆಗಳಾದ್ಯಂತ ಬಾಡಿಗೆಗಳು 2019ರಿಂದ ಎರಡಷ್ಟು ಏರಿಕೆಯಾಗಿದ್ದು, ಭಾರತದ ಪ್ರಮುಖ ನಗರಗಳಲ್ಲಿ ವ್ಯಾಪಕವಾದ ಹೆಚ್ಚಳವನ್ನು ಪ್ರತಿಧ್ವನಿಸುತ್ತಿದೆ ಎಂದು ಅನರಾಕ್ ಡೇಟಾ ಪ್ರಕಟಿಸಿದೆ. ಆದರೆ ಬೆಂಗಳೂರು ಇತ್ತೀಚೆಗೆ ದೊಡ್ಡ ಹೆಚ್ಚಳವನ್ನು ಕಂಡಿದೆ ಏಕೆಂದರೆ ಅದು ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾಗಿದೆ ಎಂದು ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.