ದೀಪಾವಳಿ ಹಬ್ಬಕ್ಕೆ ಕನ್ನಡ ಸಿನಿ ಪ್ರೇಮಿಗಳಿಗೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆದ್ರೆ ಇದು ಕಾಂತಾರ ಸಿನಿಮಾ ಅಪ್ಡೇಟ್ ಅಲ್ಲ, ಬದಲಾಗಿ ತಮ್ಮ ನಟನೆಯ ಮತ್ತೊಂದು ಬಿಗ್ ಸಿನಿಮಾದ ಅಪ್ಡೇಟ್ ಕೊಟ್ಟಿದ್ದಾರೆ ರಿಷಭ್ ಶೆಟ್ಟಿ.ಈ ಪ್ರಾಜೆಕ್ಟ್ ಮೂಲಕ ತೆಲುಗು ಚಿತ್ರರಂಗಕ್ಕೆ ರಿಷಭ್ ಪಾದರ್ಪಣೆ ಮಾಡಲಿದ್ದಾರೆ.
ಕಳೆದ ವರ್ಷ ತೆಲುಗಿನಲ್ಲಿ ತೆರೆಕಂಡು ಭಾರತದಾದ್ಯಂತ ಸಿನಿಮಾ ಪ್ರೇಕ್ಷರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಹನುಮಾನ್ ಚಿತ್ರ ತಂಡವನ್ನು ರಿಷಭ್ ಶೆಟ್ಟಿ ಸೇರಿಕೊಂಡಿದ್ದಾರೆ. ಕೇವಲ ಹೊಸಬರನ್ನೇ ಮುಂದಿಟ್ಟುಕೊಂಡು ಅದ್ಭುತ ಸಿನಿಮಾ ಕಟ್ಟುಕೊಟ್ಟಿದ್ದ ನಿರ್ದೇಶಕ ಪ್ರಶಾಂತ್ ವರ್ಮ, ಸಿನಿಮಾಗೆ ಸಿಕ್ಕ ಬಿಗ್ ಸಕ್ಸಸ್ ನಂತರ ಹನುಮಾನ್ 2 ಘೋಷಣೆ ಮಾಡಿದ್ರು.
ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರ ತಂಡ ರಿಷಬ್ ಶೆಟ್ಟಿ ಲುಕ್ ರಿವೀಲ್ ಮಾಡಿದ್ದು, ವಾನರನ ಅವತಾರದಲ್ಲಿ ರಿಷಬ್ ಕಾಣಿಸಿಕೊಂಡಿದ್ದಾರೆ. ಡಿವೈನ್ ಸ್ಟಾರ್ ರ ಈ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದು, ಆದಷ್ಟು ಬೇಗ ಕಾಂತಾರ ಪ್ರೀಕ್ವೆಲ್ ಬಗ್ಗೆಯೂ ಅಪ್ಡೇಟ್ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.