ಬಿಹಾರ: ರಾಮನವಮಿ ಆಚರಣೆ ವೇಳೆ ನಡೆದ ಹಿಂಸಾಚಾರಗಳಿಗೆ ಸಾಕ್ಷಿಯಾದ ನಂತರ ಬಿಹಾರಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಸಾರಂ ಮತ್ತು ಬಿಹಾರ್ ಶರೀಫ್ ಗಳಲ್ಲಿ ದುಷ್ಕರ್ಮಿಗಳು ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂದು ನಿತೀಶ್ ಕುಮಾರ್ ಸರಕಾರವನ್ನು ಟೀಕಿಸಿದ್ದಾರೆ.
’ಗಲಭೆಕೋರರು ಸಸಾರಾಮ್ ಮತ್ತು ಬಿಹಾರ ಶರೀಫ್ ಗಳಲ್ಲಿ ಅಟ್ಟಹಾಸ ಮೆರೆದಿದ್ದಾರೆ. 2025ರಲ್ಲಿ ಬಿಹಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಂತಹವರನ್ನು ತಲೆಕೆಳಗೆ ಮಾಡಿ ನೇತುಹಾಕಲಾಗುವುದು’ ಎಂದರು.
ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಲಾಲೂ ಪ್ರಸಾದ್ ಯಾದವ್ ಅವರ ಜಂಗಲ್ ರಾಜ್ ಪಾರ್ಟಿ ಜೊತೆಗಿರುವ ಸರಕಾರ ಬಿಹಾರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸಾಧ್ಯವೇ?. ಅಧಿಕಾರದ ಆಸೆಗಾಗಿ ನಿತೀಶ್ ಕುಮಾರ್ ಲಾಲೂ ಅವರ ಮಡಿಲಲ್ಲಿ ಕುಳಿತಿದ್ದಾರೆ. ಇಬ್ಬರು ಓಲೈಕೆಯ ರಾಜಕಾರಣ ಮಾಡಿದ್ದರಿಂದಲೇ ಭಯೋತ್ಪಾದನೆ ಹೆಚ್ಚಿತ್ತು’ ಎಂದರು.