Monday, April 21, 2025
Homeಟಾಪ್ ನ್ಯೂಸ್REPUBLIC DAY: ಬಲಿಷ್ಠ ಭಾರತ ನಿರ್ಮಾಣಕ್ಕೆ ಕಾರ್ಯೋನ್ಮುಖರಾಗಿ ಎಂದ ಪ್ರಧಾನಿ - ಆತ್ಮಾವಲೋಕನ ಮಾಡಿಕೊಳ್ಳಿ...

REPUBLIC DAY: ಬಲಿಷ್ಠ ಭಾರತ ನಿರ್ಮಾಣಕ್ಕೆ ಕಾರ್ಯೋನ್ಮುಖರಾಗಿ ಎಂದ ಪ್ರಧಾನಿ – ಆತ್ಮಾವಲೋಕನ ಮಾಡಿಕೊಳ್ಳಿ ಎಂದ ಸಿಎಂ!

ನವದೆಹಲಿ : ದೇಶದೆಲ್ಲೆಡೆ 75ನೇ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದೆ. ಗಣತಂತ್ರ ದಿನದ ಸಡಗರಕ್ಕೆ ಪಿಎಂ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮೋದಿ, ಅಭೂತಪೂರ್ವ ಗಣತಂತ್ರ ವ್ಯವಸ್ಥೆ ಜಾರಿಯಾಗಿ 75 ವರ್ಷಗಳು ಸಂದಿವೆ. ಭಾರತದ ಹೆಮ್ಮೆಯ ಮಹಿಳೆಯರು ಹಾಗೂ ಪುರುಷರು ಪ್ರಜಾಪ್ರಭುತ್ವವನ್ನ ಎತ್ತಿಹಿಡಿತಿದ್ದಾರೆ. ಜನರ ಒಗ್ಗಟ್ಟಿನ ಫಲವಾಗಿ ಸಂವಿಧಾನ ಬಲವಾಗಿ ನಿಂತಿದೆ ಎಂದಿದ್ದಾರೆ.

ಮುಂದಿನ ದಿನದಲ್ಲಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಎಲ್ಲರೂ ಕಾರ್ಯೋನ್ಮುಖರಾಗಬೇಕು. ಸoವಿಧಾನ ಸದೃಢ ಭಾರತ ನಿರ್ಮಾಣಕ್ಕೆ ಸೋಪಾನ ಎಂದು ಮೋದಿ ಬಣ್ಣಿಸಿದ್ದಾರೆ.

 

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರೂ ಸಹ ಎಕ್ಸ್‌ ಖಾತೆಯ ಮೂಲಕ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. 76ನೇ ಗಣರಾಜ್ಯೋತ್ಸವವನ್ನು ನಾವೆಲ್ಲರೂ ಒಂದಾಗಿ ಸಂಭ್ರಮಿಸುವ ಜೊತೆಯಲ್ಲಿ,
ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಘೋಷಿಸಿಕೊಂಡ 75 ವರ್ಷಗಳ ನಂತರವೂ ದೇಶದಲ್ಲಿ ಅಸಮಾನತೆ, ಅಸ್ಪೃಶ್ಯತೆ, ತಾರತಮ್ಯ, ಬಡತನ ಯಾಕೆ ಜೀವಂತವಾಗಿದೆ ಎನ್ನುವ ಬಗ್ಗೆಯೂ ಆತ್ಮಾವಲೋಕನ ಮಾಡೋಣ. ತಾರತಮ್ಯ ಹಾಗೂ ಅಸಮಾನತೆ ಹೆಚ್ಚಾದಂತೆಲ್ಲ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ದುರ್ಬಲಗೊಂಡು, ಅಧಿಕಾರ ಹಾಗೂ ಅವಕಾಶಗಳು ಉಳ್ಳವರ ಪಾಲಾಗುತ್ತದೆ ಎನ್ನುವ ವಾಸ್ತವವನ್ನು ಅರ್ಥಮಾಡಿಕೊಳ್ಳೋಣ. ಗಣರಾಜ್ಯೋತ್ಸವ ಎಂದರೆ ಸಂಭ್ರಮದಲ್ಲಿ ಮೈಮರೆಯುವ ದಿನವಲ್ಲ,
ಸಂವಿಧಾನದ ಆಶಯಗಳು ಎಷ್ಟರ ಮಟ್ಟಿಗೆ ಈಡೇರಿವೆ ಎನ್ನುವುದನ್ನು ಮೌಲ್ಯಮಾಪನ ಮಾಡಬೇಕಾದ, ಜನರು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಕಡೆಗೆ ಜಾಗೃತರಾಗಬೇಕಾದ ದಿನ

ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾತಂತ್ರ್ಯ, ಸಮಾನತೆ ಹಾಗೂ ಘನತೆಯ ಬದುಕನ್ನು ಸಂಭ್ರಮಿಸುವಂತಹ ಕಲ್ಯಾಣ ರಾಜ್ಯವನ್ನು ಕಟ್ಟಲು ನಾವೆಲ್ಲ ಕೂಡಿ ಪ್ರಯತ್ನಿಸೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!