Saturday, March 15, 2025
Homeಆಧ್ಯಾತ್ಮAstro Tips: ಗಣೇಶನಿಗೆ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟ ಬುತ್ತಿ...!

Astro Tips: ಗಣೇಶನಿಗೆ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟ ಬುತ್ತಿ…!

ಹಿಂದೂ ಧರ್ಮದಲ್ಲಿ ವಾರದ ಏಳು ದಿನವೂ ಒಂದೊಂದು ದೇವರಿಗೆ ಸಮರ್ಪಿತವಾಗಿದ್ದು, ಬುಧವಾರದಂದು ಶಿವ ಮತ್ತು ಪಾರ್ವತಿ ಸುತನಾದ ಗಣೇಶನ ಆರಾಧನೆಗೆ ಮೀಸಲಿಡಲಾಗಿದೆ.

ಈ ದಿನದಂದು ಗಣಪನನ್ನು  ಶ್ರದ್ಧಾ – ಭಕ್ತಿಯಿಂದ ಪೂಜಿಸಿದ್ದರೆ ಸಕಲ ಇಷ್ಟಾರ್ಥ ಸಿದ್ದಿಸುತ್ತದೆ. ಗಣಪತಿ ವಿಘ್ನ ವಿನಾಶಕನಾಗಿದ್ದು, ನಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ವಿಘ್ನಗಳನ್ನು ನಿವಾರಿಸುವವನು ಎಂದು ನೆನೆದು ಭಕ್ತರು ಪೂಜಿಸುತ್ತಾರೆ. ಯಾವುದೇ ಕಾರ್ಯದ ಆರಂಭಕ್ಕೂ ಮೊದಲು ಗಣೇಶನಿಗೆ ಪ್ರಥಮ ಪೂಜೆಯನ್ನು ನೆರವೇರಿಸಲಾಗುತ್ತದೆ.

ಆದರೆ ಕೆಲವೊಮ್ಮೆ ತಿಳಿಯದೇ ಗಣೇಶ ಪೂಜಿಸುವ ವೇಳೆ ಕೆಲವೊಂದು ತಪ್ಪುಗಳು ನಡೆದು ಹೋಗುತ್ತದೆ. ತಿಳಿಯದೇ ಆದರೂ ಇದರಿಂದಾಗಿ ಅಶುಭ ಫಲ ದೊರೆಯುತ್ತದೆ.

ಹಾಗಾಗಿ ಈ ಪ್ರಮಾದ ಮುಂದೆ ಆಗಬಾರದೆಂದು ಗಣೇಶನ ಪೂಜೆ ವೇಳೆ ಪಾಲಿಸಬೇಕಾದ ಕೆಲ ನಿಯಮಗಳನ್ನು ಇಲ್ಲಿ ಹೇಳಲಾಗಿದ್ದು, ಗಣಪನ ಪೂಜೆಯಲ್ಲಿ ಯಾವ ವಸ್ತುಗಳನ್ನು ಬಳಸಬರಾದು ಎಂದು ಇಲ್ಲಿ ಹೇಳಲಾಗಿದೆ.

ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಗಣೇಶನಿಗೆ ಅರ್ಪಿಸ ಬೇಡಿ.

ತುಳಸಿ

ಗಣೇಶ ಪೂಜೆಯಲ್ಲಿ ತುಳಸಿಯ ಬಳಕೆ ಮಾಡಬಾರದು ಎನ್ನಲಾಗುತ್ತದೆ. ಏಕೆಂದರೆ ತುಳಸಿಯು ಗಣೇಶನಿಗೆ ಶಾಪ ನೀಡಿದಳು ಎಂದು ಪುರಾಣ ಕಥೆಯಲ್ಲಿ ವಿವರಿಸಲಾಗಿದೆ. ಈ ಕಾರಣಕ್ಕಾಗಿ ತುಳಸಿಯನ್ನು ಗಣೇಶನ ಪೂಜೆಯಲ್ಲಿ ಬಳಸುವುದಿಲ್ಲ. ಹಾಗಾಗಿ ತುಳಸಿ ಎಲೆಗಳನ್ನು ಗಣಪತಿಯ ಪ್ರಸಾದದಲ್ಲಿ ಸೇರಿಸಲಾಗುವುದಿಲ್ಲ. ಹೀಗಾಗಿ ಗಣೇಶನ ಪೂಜೆಯಲ್ಲಿ ತುಳಸಿಯನ್ನು ಬಳಸಲಾಗುವುದಿಲ್ಲ.

ಕೇದಿಗೆ ಹೂವುಗಳು

ಗಣಪತಿ ಪೂಜೆಯಲ್ಲಿ ಕೇದಿಗೆ ಹೂವುಗಳನ್ನು ಅರ್ಪಿಸಬಾರದು. ಹೀಗೆ ಮಾಡುವುದರಿಂದ ಗಣಪತಿಗೆ ಕೋಪ ಬರಬಹುದು ಎಂಬ ನಂಬಿಕೆ ಇದೆ.

ಈ ವಸ್ತ್ರ ಧರಿಸಬೇಡಿ

ಗಣಪತಿಯನ್ನು ಪೂಜಿಸುವಾಗ ನೀಲಿ ಮತ್ತು ಕಪ್ಪು ಬಣ್ಣದ ಬಟ್ಟೆಯನ್ನು ಹಾಕಿಕೊಳ್ಳುವುದು ಶುಭವಲ್ಲ. ಗಣೇಶನಿಗೆ ಕೆಂಪು ಮತ್ತು ಹಳದಿ ಪ್ರಿಯವಾದ ಬಣ್ಣಗಳಾಗಿವೆ. ಹಾಗಾಗಿ ಗಣಪತಿಯನ್ನು ಪೂಜಿಸುವ ಸಂದರ್ಭದಲ್ಲಿ ಕೆಂಪು ಅಥವಾ ಹಳದಿ ಬಣ್ಣದ ವಸ್ತ್ರವನ್ನು ಹಾಕಿಕೊಳ್ಳುವುದು ಶುಭ ಎಂದು ಹೇಳಲಾಗುತ್ತದೆ.

ಇನ್ನು ಗಣಪತಿಯ ಪೂಜೆಯ ವೇಳೆ ದೇವರ ಮೂರ್ತಿಯು ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನತ್ತ ಮುಖ ಮಾಡಿರಬಾರದು. ಇದರಿಂದ ಸಮಸ್ಯೆಗಳು ಉಂಟಾಗುತ್ತವೆ.

 

ಹೆಚ್ಚಿನ ಸುದ್ದಿ

error: Content is protected !!