Monday, February 9, 2026
Homeಆಧ್ಯಾತ್ಮAstro Tips: ಶಿವನ ಅನುಗ್ರಹ ಪಡೆಯಲು ಸೋಮವಾರ ಈ ಮಂತ್ರಗಳನ್ನು ಪಠಿಸಿ

Astro Tips: ಶಿವನ ಅನುಗ್ರಹ ಪಡೆಯಲು ಸೋಮವಾರ ಈ ಮಂತ್ರಗಳನ್ನು ಪಠಿಸಿ

ಹಿಂದೂ ಧರ್ಮದಲ್ಲಿ ಮಂತ್ರಗಳನ್ನು ಜಪಿಸದೆ ಮಾಡಿದ ಪೂಜಾ – ಪಾಠಗಳು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಹಿಂದೂ ಧರ್ಮದಲ್ಲಿ ಆಚರಿಸಲಾಗುವ ಪ್ರತಿಯೊಂದು ಪೂಜೆಯಲ್ಲೂ ಆಯಾ ಪೂಜೆಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದು ಮುಖ್ಯವೆಂದು ಹೇಳಲಾಗುತ್ತದೆ. ವಿಶೇಷವಾಗಿ ಶಿವ ಪೂಜೆಯಲ್ಲಿ ಶಿವನಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಲೇಬೇಕು. ಇಲ್ಲವಾದರೆ ಶಿವ ಪೂಜೆಯ ಫಲವು ದೊರಕದು. ಓರ್ವ ವ್ಯಕ್ತಿಗೆ ಶಿವ ಪೂಜೆಯನ್ನು ಮಾಡಲು ಸಾಧ್ಯವಾಗದಿದ್ದರೆ ಆ ವ್ಯಕ್ತಿಯು ಶಿವ ಮಂತ್ರವನ್ನು ಪಠಿಸುವ ಮೂಲಕ ಪೂರ್ಣ ಫಲವನ್ನು ಪಡೆದುಕೊಳ್ಳಬಹುದು.

ಅದರಲ್ಲೂ ಸೋಮವಾರದಂದು ಶಿವನನ್ನು ಮಂತ್ರಗಳಿಂದ ಪೂಜಿಸಬೇಕು. ಯಾವೊಬ್ಬ ವ್ಯಕ್ತಿಯು ಸೋಮವಾರದಂದು ಶಿವ ಪೂಜೆಯನ್ನು ಮಾಡುತ್ತಿದ್ದರೆ, ಸೋಮವಾರ ಶಿವ ಪೂಜೆಯ ಲಾಭವನ್ನು ಪಡೆದುಕೊಳ್ಳಲು, ಶಿವನ ಆಶೀರ್ವಾದವನ್ನು ಪಡೆದುಕೊಳ್ಳಲು ಹಾಗೂ ಆ ಮುಕ್ಕಣ್ಣನ ಕೃಪೆಗೆ ಪಾತ್ರರಾಗಲು ಶಿವ ಮಂತ್ರವನ್ನು ಪಠಿಸಬೇಕು. ಸೋಮವಾರ ಪಠಿಸಬೇಕಾದ ಶಿವ ಮಂತ್ರ ಯಾವುದು..? ಇಂದು ಈ ಮಂತ್ರವನ್ನು ತಪ್ಪದೇ ಪಠಿಸಿ.

ಶಿವ ಪೂಜೆಗೆ ಶಿವ ನಾಮಾವಳಿ ಮಂತ್ರ:

ಶಿವನನ್ನು ಮೆಚ್ಚಿಸಲು ಹಾಗೂ ಆತನ ಆಶೀರ್ವಾದವನ್ನು ಪಡೆದುಕೊಳ್ಳಲು ಪ್ರತೀ ಸೋಮವಾರದಂದು ಶಿವ ಪೂಜೆ ಸಮಯದಲ್ಲಿ ಶಿವನ ಈ ನಾಮಾವಳಿಯನ್ನು ಪಠಿಸಬೇಕು. ಶಿವ ನಾಮಾವಳಿಯನ್ನು ದಿನದ ಯಾವುದೇ ಸಮಯದಲ್ಲಿ ಬೇಕಾದರೂ 108 ಬಾರಿ ಜಪಿಸಬೇಕು. ಸಂಪೂರ್ಣ ಒಂದು ತಿಂಗಳುಗಳ ಕಾಲ ಬೆಳಗ್ಗೆ ಮತ್ತು ಸಂಜೆ 108 ಬಾರಿ ಶಿವ ನಾಮಾವಳಿಯನ್ನು ಪಠಿಸುವುದು ಉತ್ತಮ. ಶಿವನನ್ನು ಪೂಜಿಸಿದ ನಂತರ, ಈ ನಾಮವಳಿ ಮಂತ್ರವನ್ನು ಜಪಿಸುವುದರಿಂದ ಶಿವನನ್ನು ಸರಳವಾಗಿ ಸಂತೋಷಗೊಳಿಸಬಹುದು

ಶಿವ ನಾಮಾವಳಿ ಮಂತ್ರ:

|| ಶ್ರೀ ಶಿವಾಯ ನಮಃ ||

|| ಶ್ರೀ ಶಂಕರಾಯ ನಮಃ ||

|| ಶ್ರೀ ಮಹೇಶ್ವರಾಯ ನಮಃ ||

|| ಶ್ರೀ ಸಾಂಬಸದಾಶಿವಾಯ ನಮಃ ||

|| ಶ್ರೀ ರುದ್ರಾಯ ನಮಃ ||

|| ಓಂ ಪಾರ್ವತಿಪತಯೇ ನಮಃ ||

|| ಓಂ ನಮೋ ನೀಲಕಂಠಾಯ ನಮಃ ||

ಶಿವ ನಮಸ್ಕಾರ ಮಂತ್ರ:

ಸೋಮವಾರದಂದು ಶಿವನನ್ನು ಪೂಜಿಸುವ ಮುನ್ನ ಈ ಶಿವ ನಮಸ್ಕಾರ ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಜಪಿಸುವಾಗ ಭಗವಾನ್‌ ಶಿವನನ್ನು ಧ್ಯಾನಿಸಬೇಕು.

” ನಮಃ ಶಂಭವಾಯ ಚ ಮಯೋಭವಾಯ ಚ ನಮಃ ಶಂಕರಾಯ ಚ ಮಯಸ್ಕರಾಯ ಚ ನಮಃ ಶಿವಾಯ ಚ ಶಿವತರಾಯ ಚ ಈಶಾನಃ ಸರ್ವ ವಿಧ್ಯಾನಾಮೀಶ್ವರಃ ಸರ್ವಭೂತಾನಾಂ ಬ್ರಹ್ಮಾಧಿಪತಿಬ್ರಹ್ಮಣೋಧಪತಿಬ್ರಹ್ಮ ಶಿವೋ ಮೇ ಅಸ್ತು ಸದಾಶಿವೋಂ ”

ಸೋಮವಾರದಂದು ಶಿವನನ್ನು ಪೂಜಿಸುವಾಗ ಈ ಮೇಲಿನ ಮಂತ್ರವನ್ನು ಪಠಿಸಬೇಕು. ಇದರಿಂದ ಶಿವನ ಕೃಪೆಯನ್ನು ಪಡೆದುಕೊಳ್ಳಬಹುದು. ಜೀವನದಲ್ಲಿ ಯಶಸ್ಸನ್ನು ಕೂಡ ಸಾಧಿಸಬಹುದು.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!