Thursday, July 16, 2026
Homeಟಾಪ್ ನ್ಯೂಸ್ANIL AMBANI : ಮುಳುಗೇ ಹೋಯ್ತಾ ಅನಿಲ್ ಅಂಬಾನಿ ದೋಣಿ - ಸಾವಿರಾರು ಕೋಟಿ ಸಾಮ್ರಾಜ್ಯ...

ANIL AMBANI : ಮುಳುಗೇ ಹೋಯ್ತಾ ಅನಿಲ್ ಅಂಬಾನಿ ದೋಣಿ – ಸಾವಿರಾರು ಕೋಟಿ ಸಾಮ್ರಾಜ್ಯ ಅಧಃಪತನ..?

ನವದೆಹಲಿ : ಖ್ಯಾತ ಉದ್ಯಮಿ ಅನಿಲ್ ಅಂಬಾನಿ (Anil ambani) ನೇತೃತ್ವದ ರಿಲಯನ್ಸ್ ಗ್ರೂಪ್​ಗೆ ಸಾಲು ಸಾಲು ಸಂಕಷ್ಟ ಎದುರಾಗಿದೆ. ಜಾರಿ ನಿರ್ದೇಶನಾಲಯ (ED), ಕೇಂದ್ರ ತನಿಖಾ ದಳ (CBI) ಮತ್ತು ಭಾರತೀಯ ಭದ್ರತಾ ಮಂಡಳಿ (SEBI) ನಿರಂತರವಾಗಿ ಗ್ರೂಪ್​ನ ಹಿಂದೆ ಬಿದ್ದಿವೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (MCA) ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್, ರಿಲಯನ್ಸ್ ಕಮ್ಯುನಿಕೇಷನ್ಸ್, ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಮತ್ತು CLE ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಹಲವು ಕಂಪನಿಗಳಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣ ಸಂಬಂಧ ಒಂದು ಕಡೆ ಮುಖೇಶ್ ಅಂಬಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮಿನುಗುತ್ತಿದ್ದಾರೆ, ಮತ್ತೊಂದೆಡೆ ಅನಿಲ್ ಅಂಬಾನಿ ಪತನದ ಕಡೆ ಹೆಜ್ಜೆ ಇಡ್ತಾ ಇದಾರೆ..

ಈಗ ಅವರ ಬ್ಯುಸಿನೆಸ್‌ನಲ್ಲಿ ಲಾಭಾನೂ ಇಲ್ಲ, ಶ್ರೀಮಂತರ ಯಾವ ಲಿಸ್ಟ್‌ನಲ್ಲೂ ಅವರ ಹೆಸರೂ ಇಲ್ಲ.. ಅಷ್ಟೇ ಅಲ್ಲ, ಅವರು ಈಗ ತನಿಖಾ ಏಜೆನ್ಸಿಗಳ ಟಾರ್ಗೆಟ್ ಆಗಿದ್ದಾರೆ.. ಒಂದರ ಮೇಲೊಂದು ಸಂಸ್ಥೆ ತನಿಖೆ ಲಂಚ ನೀಡಿ ಬ್ಯಾಂಕ್ ಗಳಿಂದ ಸಾಲ ಪಡೆದ ಆರೋಪದಡಿ ಸಿಬಿಐ ಮತ್ತು ಇ.ಡಿ ಕೇಸ್ ದಾಖಲಿಸಿದ್ದವು. ಬಳಿಕ ಇಡಿ ಅಕ್ರಮ ಹಣ ವರ್ಗಾವಣೆಯ ಆರೋಪದಡಿ ಕೇಸ್ ದಾಖಲಿಸಿತ್ತು.

ಇದನ್ನೂ ಓದಿ : ಅನಿಲ್‌ ಅಂಬಾನಿಗೆ ಶಾಕ್‌ ಕೊಟ್ಟ ಇಡಿ, 3 ಸಾವಿರ ಕೋಟಿ ಆಸ್ತಿ ಮುಟ್ಟುಗೋಲು

ಈಗ ಅನಿಲ್ ಅಂಬಾನಿ ವಾಸ ಇರುವ ಮನೆ ಸೇರಿದಂತೆ ದೇಶದ 8 ನಗರಗಳಲ್ಲಿರುವ ಅನಿಲ್ ಅಂಬಾನಿಗೆ ಸೇರಿದ ಆಸ್ತಿಗಳನ್ನು ಇ.ಡಿ ಜಪ್ತಿ ಮಾಡಿದೆ. ಬರೋಬ್ಬರಿ 7,500 ಕೋಟಿ ಮೌಲ್ಯದ ಅನಿಲ್ ಅಂಬಾನಿಗೆ ಸೇರಿದ ಆಸ್ತಿಗಳನ್ನು ಇ.ಡಿ. ಜಪ್ತಿ ಮಾಡಿದೆ.
ಸಾಲದ ಸುಳಿಯಿಂದ ಬಳಲುತ್ತಿರುವ ರಿಲಯನ್ಸ್ ಸಮೂಹ ಸಂಸ್ಥೆಯ ವಿರುದ್ಧ ED ತನಿಖೆ ಚುರುಕುಗೊಳಿಸಿದೆ. ಈ ವಾರದ ಆರಂಭದಲ್ಲಿ, ರಿಲಯನ್ಸ್ ಗ್ರೂಪ್ ಸಂಸ್ಥೆಗಳಿಗೆ ಸೇರಿದ ಸುಮಾರು 7,500 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಜಪ್ತಿ ಮಾಡಲಾದ ಆಸ್ತಿಗಳಲ್ಲಿ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ 30 ಆಸ್ತಿಗಳು, ಆಧಾರ್ ಪ್ರಾಪರ್ಟಿ ಕನ್ಸಲ್ಟೆನ್ಸಿ, ಮೋಹನ್‌ಬೀರ್ ಹೈಟೆಕ್ ಬಿಲ್ಡ್, ಗಮೇಸಾ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್, ವಿಹಾನ್ 43 ರಿಯಾಲ್ಟಿ ಮತ್ತು ಕ್ಯಾಂಪಿಯನ್ ಪ್ರಾಪರ್ಟೀಸ್‌ಗೆ ಸಂಬಂಧಿಸಿದ ಆಸ್ತಿಗಳು ಸೇರಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಅನಿಲ್ ಅಂಬಾನಿಗೆ ಸಂಕಷ್ಟ ಯಾಕೆ?

2017 ಮತ್ತು 2019ರ ನಡುವೆ ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಅಡಿಯಲ್ಲಿರುವ ಸಂಸ್ಥೆಗಳಿಗೆ ಯೆಸ್‌ ಬ್ಯಾಂಕ್‌ 3,000 ಕೋಟಿ ರೂ. ಸಾಲ ನೀಡಿತ್ತು. ಆದರೆ ಈ ಸಾಲದ ಹಣವನ್ನ ಗ್ರೂಪ್‌ನ ಇತರ ಶೆಲ್‌ ಕಂಪನಿಗಳಿಗೆ (ಬೇನಾಮಿ ಕಂಪನಿ) ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು.

ಬೇನಾಮಿ ಕಂಪನಿಗಳಿಗೆ ಅಕ್ರಮ ಹಣ ವರ್ಗಾವಣೆ ಮಾಡಿದ್ದಕ್ಕೆ ಬ್ಯಾಂಕ್‌ಗಳು, ಷೇರುದಾರರು, ಹೂಡಿಕೆದಾರರು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳನ್ನ ವಂಚಿಸುವ ಮೂಲಕ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದಾಗಿ ಇಡಿ ಆರೋಪಿಸಿದೆ.ಷೇರು ಮಾರುಕಟ್ಟೆಯಿಂದಲೂ ನಿಷೇಧ
ಸಾಲದ ಸುಳಿಯಲ್ಲಿ ಸಿಲುಕಿರುವ ಕೈಗಾರಿಕೋದ್ಯಮಿ ಅನಿಲ್ ಅಂಬಾನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಹಣ ದುರುಪಯೋಗದ ಪ್ರಕರಣದಲ್ಲಿ ಐದು ವರ್ಷಗಳ ಕಾಲ ಷೇರು ಮಾರುಕಟ್ಟೆಯಿಂದ ಮಾರುಕಟ್ಟೆ ನಿಯಂತ್ರಕ ಸೆಬಿ ನಿಷೇಧಿಸಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!