ಸಾಕಷ್ಟು ಪೋಷಕಾಂಶಗಳಿರುವ ಕಾರ್ನ್ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಆ ಕಾರಣಕ್ಕೆ ಚಿಕ್ಕ ಮಕ್ಕಳಿಂದ ದೊಡ್ಡವರು ಕಾರ್ನ್ ಸೇವಿಸಬೇಕು ಎನ್ನುತ್ತಾರೆ. ಆದರೆ ಯಾವಾಗಲೂ ಕಾರ್ನ್ ಬೇಯಿಸಿಯೋ ಅಥವಾ ಸುಟ್ಟು ತಿಂದರೇ ಏನು ಮಜಾ… ಮಕ್ಕಳು ಅದನ್ನು ತಿನ್ನಲು ಕೇಳೋಲ್ಲ. ಅದೇ ಕಾರ್ನ್ ಯಿಂದ ರುಚಿಯಾದ ಸ್ನ್ಯಾಕ್ಸ್ ಮಾಡಿಕೊಟ್ಟರೆ ಖುಷಿಯಿಂದ ತಿಂತಾರೆ, ಹಾಗಂತ ದಿನಾ ಒಂದೇ ರೀತಿ ತಿಂಡಿ ತಿಂದ್ರೆ ಮಕ್ಕಳು ಖುಷಿ ಪಡೊಲ್ಲ. ಅದಕ್ಕೆ ಸ್ಪೆಷಲ್ ಆಗಿ ಕಾರ್ನ್ ಲಾಲಿಪಾಪ್ ಮಾಡಿ.
ಚಿಕನ್ ಲಾಲಿಪಾಪ್ ಗೊತ್ತು, ಇದ್ಯಾವುದು ಕಾರ್ನ್ ಲಾಲಿಪಾಪ್ ಅಂತ ಯೋಚ್ನೆ ಮಾಡ್ತಾ ಇದೀರಾ, ಕಾರ್ನ್ ಯಿಂದ ಸಖತ್ ಟೇಸ್ಟಿ, ಕ್ರಂಚಿ ಎಗ್ ಲಾಲಿಪಾಪ್ ಮಾಡಬಹುದು. ಇದನ್ನು ಸಿಂಪಲ್ ಮಾಡಿ ಮಾಡಬಹುದಾದ ರೆಸಿಪಿಯಾಗಿದೆ. ಇದು ಎಲ್ಲರಿಗೂ ಇಷ್ಟವಾಗುವ ರೆಸಿಪಿ. ಹಾಗಾದ್ರೆ ಕಾರ್ನ್ ಲಾಲಿಪಾಪ್ ಮಾಡೋದು ಹೇಗೆ ನೋಡಿ.
ಬೇಕಾಗುವ ಪದಾರ್ಥಗಳು
- ಆಲೂಗಡ್ಡೆ- 1-2
- ಸ್ವೀಟ್ ಕಾರ್ನ್- 2 ಬಟ್ಟಲು (ಬೇಯಿಸಿದ್ದು)
- ಕ್ಯಾಪ್ಸಿಕಂ-1
- ಈರುಳ್ಳಿ-2-3 (ಸಣ್ಣಗೆ ಕತ್ತರಿಸಿದ್ದು)ಕಡಲೆ ಹಿಟ್ಟು
- ಕಡಲೆ ಹಿಟ್ಟು- 1 ಬಟ್ಟಲು
- ಅಕ್ಕಿ ಹಿಟ್ಟು- ಅರ್ಧ ಬಟ್ಟಲು
- ಗರಂಮಸಾಲೆ ಪುಡಿ- 1 ಚಮಚ
- ಕಾಳುಮೆಣಿಸಿನ ಪುಡಿ- ಅರ್ಧ ಚಮಚ
- ಪುದೀನಾ- ಸ್ವಲ್ಪ
- ಹಸಿಮೆಣಸಿನ ಕಾಯಿ- 2-3
- ಕೊತ್ತಂಬರಿ ಸೊಪ್ಪು-ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
- ಬ್ರೆಡ್ ಕ್ರಮ್ಸ್- ಅರ್ಧ ಬಟ್ಟಲು
- ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
ಮಾಡುವ ವಿಧಾನ