ಹುರುಳಿ ಕಾಳು (Horse Gram) ಆರೋಗ್ಯಕ್ಕೆ (Health) ತುಂಬಾ ಉತ್ತಮ. ಇದು ಮೈಕೈ ನೋವು ಕಡಿಮೆ ಮಾಡಲು ಮತ್ತು ತೂಕ ಇಳಿಸಲು (Weight Loss) ಸಹಕಾರಿ. ರುಚಿಯಾದ ಹುರುಳಿ ಕಾಳಿನ ರಸಂ ಅಥವಾ ಕಟ್ಟು ಸಾರು ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
* ಹುರುಳಿಕಾಳು – 4 ಕಪ್
* ನೀರು – 3 ಕಪ್
* ಹುಣಸೆ ಹಣ್ಣು-ಸಣ್ಣನಿಂಬೆ ಗಾತ್ರ
* ರಸಂ ಪುಡಿ – 1 ಟೀಸ್ಪೂನ್
* ಬೆಳ್ಳುಳ್ಳಿ- 5-6 ಕಳಿ
* ಹಸಿಮೆಣಸು -1 (ಐಚ್ಛಿಕ)
* ಅರಿಶಿಣ – ಚಿಟಿಕೆ
* ಉಪ್ಪು – ರುಚಿಗೆ ತಕ್ಕಷ್ಟು
* ಎಣ್ಣೆ-1 ಟೀಸ್ಪೂನ್
* ಸಾಸಿವೆ – ¾ ಟೀಸ್ಪೂನ್
* ಜೀರಿಗೆ – ¾ ಟೀಸ್ಪೂನ್
* ಕರಿಬೇವು – ಸ್ವಲ್ಪ
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಬೆಲ್ಲ- (ಐಚ್ಚಿಕ)
ಮಾಡುವ ವಿಧಾನ:
* ಮೊದಲು ಹುರುಳಿ ಕಾಳನ್ನು ಚೆನ್ನಾಗಿ ತೊಳೆದು, ಸಾಕಷ್ಟು ನೀರು ಹಾಕಿ ಕುಕ್ಕರ್‌ನಲ್ಲಿ 5-6 ವಿಸಲ್ ಬರುವವರೆಗೆ ಬೇಯಿಸಿಕೊಳ್ಳಿ. (ಕಾಳು ಚೆನ್ನಾಗಿ ಮೆತ್ತಗಾಗಬೇಕು.
* ಕಾಳು ಬೆಂದ ಬಳಿಕ ಅದರಲ್ಲಿರುವ ನೀರನ್ನು ಒಂದು ಪಾತ್ರೆಗೆ ಬಗ್ಗಿಸಿಕೊಳ್ಳಿ. ಈ ನೀರನ್ನೇ ನಾವು ರಸಂ ಮಾಡಲು ಬಳಸುತ್ತೇವೆ.
* ಮಿಕ್ಸಿ ಜಾರ್‌ಗೆ 2 ಚಮಚ ಬೆಂದ ಹುರುಳಿ ಕಾಳು, ಜೀರಿಗೆ, ಮೆಣಸು ಮತ್ತು ಬೆಳ್ಳುಳ್ಳಿ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
* ಇತ್ತ ಬಗ್ಗಿಸಿಕೊಂಡ ಹುರುಳಿ ಕಾಳಿನ ನೀರಿಗೆ, ರುಬ್ಬಿದ ಮಸಾಲೆ, ಹೆಚ್ಚಿದ ಟೊಮೆಟೊ, ಹುಣಸೆಹಣ್ಣಿನ ರಸ, ಸಾರಿನ ಪುಡಿ, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಸಿ.
* ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಕಾಯಿಸಿ ಸಾಸಿವೆ, ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಒಗ್ಗರಣೆ ಸಿದ್ಧಪಡಿಸಿ.
* ಈಗ ಸಿದ್ಧಪಡಿಸಿದ ಒಗ್ಗರಣೆಯನ್ನು ಕುದಿಯುತ್ತಿರುವ ರಸಂಗೆ ಸೇರಿಸಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಬಿಸಿಬಿಸಿಯಾದ ಹುರುಳಿ ಕಾಳಿನ ರಸಂ ಸಿದ್ಧ.