ಕೆಲವೊಮ್ಮೆ ಬೆಳಗ್ಗೆ ಹೊಟ್ಟೆತುಂಬಾ ತಿಂದರೂ ಸ್ವಲ್ಪ ಸಮಯ ಕಳೆಯುವಷ್ಟರಲ್ಲಿ ಮತ್ತೆ ಹಸಿವು ಕಾಡುತ್ತದೆ. ಆದರೆ ನಿಮಗೆ ಹೆಚ್ಚು ಸಮಯ ಹೊಟ್ಟೆ ತುಂಬಿರಬೇಕೆಂದರೆ ಸೀತಾಫಲ ಸ್ಪೂಥಿ ಬೆಸ್ಟ್ ಆಪ್ಪನ್.
ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ನಿಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಆದ್ದರಿಂದ ನೀವು ಹೆಚ್ಚು ಕಾಲ ಹೊಟ್ಟೆ ತುಂಬಿದಂತೆ ಇರುತ್ತೀರಿ. ಈಗ ಈ ಆರೋಗ್ಯಕರ ರೆಸಿಪಿಯನ್ನು ಹೇಗೆ ಮಾಡುವುದು ಎಂದು ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು:
ಬಾದಾಮಿ ಹಾಲು – 1 ಕಪ್
ಸೀತಾಫಲದ ತಿರುಳು – 1 ಕಪ್
ಕೊಚ್ಚಿದ ಶುಂಠಿ – ಅರ್ಧ ಟೀಸ್ಪೂನ್
ಜೇನುತುಪ್ಪ – 1 ಟೀಸ್ಪೂನ್
ಬಾದಾಮಿ ಚೂರುಗಳು – 1 ಟೀಸ್ಪೂನ್
ಏಲಕ್ಕಿ ಪುಡಿ – 1 ಚಿಟಿಕೆ
ಮಾಡುವ ವಿಧಾನ:
* ಮೊದಲಿಗೆ ಬಾದಾಮಿ ಚೂರುಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿಕೊಂಡು ಬಾಣಲೆ ಅಥವಾ ಪ್ಯಾನ್ ಗೆ ಹಾಕಿ ಹುರಿದುಕೊಳ್ಳಿ.
* ಈಗ ಒಂದು ಮಿಕ್ಸರ್ ಜಾರ್ ತೆಗೆದುಕೊಂಡು ಹುರಿದ ಬಾದಾಮಿ ಚೂರುಗಳು, ಸಣ್ಣಗೆ ತುರಿದುಕೊಂಡ ಶುಂಠಿ, ಸೀತಾಫಲ ತಿರುಳು, ಬಾದಾಮಿ ಹಾಲು, ಜೇನುತುಪ್ಪ ಮತ್ತು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ. ಅದನ್ನು ಸುಮಾರು ರುಬ್ಬಿಕೊಳ್ಳಿ.
* ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಅರ್ಧ ಗಂಟೆ ಫ್ರಿಜ್‌ನಲ್ಲಿಡಿ.
* ಬಳಿಕ ಗ್ಲಾಸ್‌ಗಳಿಗೆ ಸುರಿದು, ಡ್ರೈ ಫ್ರೂಟ್ಸ್ ಗಳಿಂದ ಅಲಂಕರಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸೀತಾಫಲ ಸ್ಮೂಥಿ ಸವಿಯಲು ಸಿದ್ಧವಾಗುತ್ತದೆ

