Wednesday, February 19, 2025
Homeಟಾಪ್ ನ್ಯೂಸ್RBI : ಗ್ರಾಹಕರೇ ಗಮನಿಸಿ.. : ಈ ಸಂಖ್ಯೆಗಳಿಂದ ಬರಲಿದೆ ಬ್ಯಾಂಕಿಂಗ್ ಕರೆಗಳು- ಇನ್ನಿಲ್ಲ...

RBI : ಗ್ರಾಹಕರೇ ಗಮನಿಸಿ.. : ಈ ಸಂಖ್ಯೆಗಳಿಂದ ಬರಲಿದೆ ಬ್ಯಾಂಕಿಂಗ್ ಕರೆಗಳು- ಇನ್ನಿಲ್ಲ ಫೇಕ್‌ ಕಾಲ್‌ ತಲೆಬಿಸಿ!

ನವದೆಹಲಿ: ಇತ್ತೀಚಿನ ದಿನಗಳಲ್ಲಿ ವಂಚನೆ ಕರೆಗಳನ್ನು ಸ್ವೀಕರಿಸುವ ಘಟನೆ ಸಾಮಾನ್ಯವಾಗಿದೆ. ಇದಕ್ಕೆ ಪೂರ್ಣವಿರಾಮ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.

ತಮ್ಮ ಗ್ರಾಹಕರಿಗೆ ವಹಿವಾಟು ಮತ್ತು ಮಾರ್ಕೆಟಿಂಗ್ ಕರೆಗಳನ್ನು ಮಾಡಲು ಹಣಕಾಸು ಸಂಸ್ಥೆಗಳಿಗೆ ಎರಡು ಮೀಸಲಾದ ಫೋನ್ ಸಂಖ್ಯೆಗಳ ಸರಣಿಯನ್ನು ಪ್ರಾರಂಭಿಸಿದೆ. ಮೊಬೈಲ್ ಬಳಕೆದಾರರನ್ನು ವಂಚನೆಯಿಂದ ರಕ್ಷಿಸಲು ಈ ಹೊಸ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಆರ್‌ಬಿಐನ ಇತ್ತೀಚಿನ ಸೂಚನೆಯು ಗ್ರಾಹಕರಿಗೆ ವಹಿವಾಟು ಸಂಬಂಧಿತ ಕರೆಗಳನ್ನು ಮಾಡಲು ಬ್ಯಾಂಕುಗಳು 1600ರಿಂದ ಪ್ರಾರಂಭವಾಗುವ ಸರಣಿಗಳನ್ನು ಮಾತ್ರ ಬಳಸಬೇಕಾಗುತ್ತದೆ ಎಂದು ಹೇಳುತ್ತದೆ. ಇನ್ನು ಗ್ರಾಹಕರಿಗೆ ಮಾರ್ಕೆಟಿಂಗ್ ಕರೆಗಳು ಮತ್ತು SMS ಅಧಿಸೂಚನೆಗಳಿಗಾಗಿ ಪ್ರತ್ಯೇಕವಾಗಿ 140 ರಿಂದ ಪ್ರಾರಂಭವಾಗುವ ಫೋನ್ ಸಂಖ್ಯೆ ಸರಣಿಯನ್ನು RBI ಮೀಸಲಿಟ್ಟಿದೆ. ಆದ್ದರಿಂದ ಬ್ಯಾಂಕ್ ನಿಜವಾಗಿಯೂ ನಿಮಗೆ ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಅಥವಾ ವಿಮೆಯಂತಹ ಸೇವೆಗಳನ್ನು ನೀಡುತ್ತಿದ್ದರೆ, ಅವುಗಳನ್ನು 140 ರಿಂದ ಪ್ರಾರಂಭವಾಗುವ ಸಂಖ್ಯೆಗಳೊಂದಿಗೆ ನೀವು ನಿರೀಕ್ಷಿಸಬಹುದಾಗಿದೆ.

ಈ ಎರಡು ಸರಣಿಗಳನ್ನು ಹೊರತುಪಡಿಸಿ ಬೇರೆ ಸಂಖ್ಯೆಗಳಿಂದ ಬರುವ ಕರೆಗಳು ನಕಲಿಯಾಗಿರುತ್ತವೆ. ಬ್ಯಾಂಕುಗಳು ಗ್ರಾಹಕರಿಗೆ ಕರೆ ಮಾಡಲು ಈ ಎರಡು ಸರಣಿ ಸಂಖ್ಯೆ ಹೊರತುಪಡಿಸಿ ಬೇರೆ ಯಾವುದೇ ಸರಣಿಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಈ ಕ್ರಮವು ಜನರು ಮೋಸದ ಕರೆಗಳಿಂದ ದೂರವಿರಲು ಸಹಾಯ ಮಾಡುತ್ತದೆ.

ಹೆಚ್ಚಿನ ಸುದ್ದಿ

error: Content is protected !!