Wednesday, May 14, 2025
Homeಟಾಪ್ ನ್ಯೂಸ್DRONE ATTACK: ರಾವಲ್ಪಿಂಡಿ ಕ್ರೀಡಾಂಗಣದ ಮೇಲೆ ಡ್ರೋನ್ ದಾಳಿ - ಇಂದು ನಡೆಯಬೇಕಿದ್ದ PSL ಪಂದ್ಯವೇ...

DRONE ATTACK: ರಾವಲ್ಪಿಂಡಿ ಕ್ರೀಡಾಂಗಣದ ಮೇಲೆ ಡ್ರೋನ್ ದಾಳಿ – ಇಂದು ನಡೆಯಬೇಕಿದ್ದ PSL ಪಂದ್ಯವೇ ರದ್ದು: VIDEO

ರಾವಲ್ಪಿಂಡಿ: ಪಾಕಿಸ್ತಾನ ಬೆಂಬಲಿತ ಉಗ್ರರು ಪಹಲ್ಗಾಮ್‌ ದಾಳಿಯ ನಂತರ ಭಾರತ ಸೇನೆ ಪಾಕಿಸ್ತಾನದ ಮೇಲೆ ಡ್ರೋನ್ ದಾಳಿ ನಡೆಸಿದೆ. ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ ಸೇರಿದಂತೆ ಹಲವು ಸ್ಥಳಗಳಿಗೆ ಹಾನಿಯಾಗಿದೆ. ಈ ದಾಳಿಯಿಂದ ಪಾಕಿಸ್ತಾನ ಸೂಪರ್ ಲೀಗ್ ರದ್ದಾಗುವ ಸಾಧ್ಯತೆಗಳಿವೆ. ಈ ದಾಳಿಯ ವಿಡಿಯೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇಂದು ಮಧ್ಯಾಹ್ನ ನಡೆದ ದಾಳಿಯಲ್ಲಿ ಕ್ರೀಡಾಂಗಣದ ಕೆಲ ಭಾಗ, ಸ್ಟೇಡಿಯಂ ಪಕ್ಕದಲ್ಲೇ ಇರುವ ರೆಸ್ಟೋರೆಂಟ್​ಗೂ ಹಾನಿಗೊಳಗಾಗಿದೆ. ಸದ್ಯ ಅಧಿಕಾರಿಗಳು ಇಡೀ ಕ್ರೀಡಾಂಗಣವನ್ನು ಸೀಲ್ ಮಾಡಿದ್ದು, ಡ್ರೋನ್ ಎಲ್ಲಿಂದ ಬಂತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ದಾಳಿಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಪಾಕಿಸ್ತಾನ ಸೂಪರ್ ಲೀಗ್‌ನ 27ನೇ ಪಂದ್ಯವು ಡೇವಿಡ್ ವಾರ್ನರ್ ನಾಯಕತ್ವದ ಕರಾಚಿ ಕಿಂಗ್ಸ್ ಮತ್ತು ಬಾಬರ್ ಅಜಮ್ ನೇತೃತ್ವದ ಪೇಶಾವರ್ ಝಲ್ಮಿ ನಡುವೆ ನಡೆಯಬೇಕಿತ್ತು. ಆದರೆ ಭಾರತದ ದಾಳಿಯಿಂದಾಗಿ ಪಂದ್ಯ ರದ್ದಾಗಿದೆ. ಸದ್ಯ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಿಎಸ್‌ಎಲ್​ನ್ನು ಇನ್ನೂ ನಿಲ್ಲಿಸಿಲ್ಲ. ಒಂದು ವೇಳೆ ಭಾರತದ ದಾಳಿ ಹೆಚ್ಚಾದರೆ ಇಡೀ ಟೂರ್ನಿ ರದ್ದಾಗುವ ಸಾಧ್ಯತೆ ಇದೆ.

ಪೇಶಾವರ, ಕರಾಚಿ ಆಟಗಾರರಿಗೆ ಭಯ ಭಯ: ಕರಾಚಿ ಕಿಂಗ್ಸ್ ಮತ್ತು ಪೇಶಾವರ್ ಝಲ್ಮಿ ತಂಡಗಳಲ್ಲಿ ಅನೇಕ ವಿದೇಶಿಯ ಆಟಗಾರರಿದ್ದಾರೆ. ನಾಯಕ ಡೇವಿಡ್ ವಾರ್ನರ್ ಅಲ್ಲದೇ, ಕರಾಚಿ ಕಿಂಗ್ಸ್ ತಂಡದಲ್ಲಿ ಜೇಮ್ಸ್ ವಿನ್ಸ್, ಮೊಹಮ್ಮದ್ ನಬಿ, ಟಿಮ್ ಸೀಫರ್ಟ್​ರಂಥಾ ವಿದೇಶಿ ಆಟಗಾರರಿದ್ದಾರೆ. ಪೇಶಾವರ್ ಝಲ್ಮಿ ತಂಡದಲ್ಲಿ ಟಾಮ್ ಕೊಹ್ಲರ್ ಕ್ಯಾಡ್ಮೋರ್, ಲ್ಯೂಕ್ ವುಡ್, ಮ್ಯಾಕ್ಸ್ ಬ್ರಯಾಂಟ್, ಅಲ್ಜಾರಿ ಜೋಸೆಫ್ ಇದ್ದಾರೆ. ಈ ಆಟಗಾರರೆಲ್ಲಾ ಭಯದಲ್ಲಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!