ಅಹಮದಾಬಾದ್: ಐಪಿಎಲ್ 16ನೇ ಆವೃತ್ತಿಗೆ ಅದ್ಧೂರಿ ಚಾಲನೆ ದೊರೆತಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಅರಿಜಿತ್ ಸಿಂಗ್, ನಟಿಯರಾದ ತಮನ್ನಾ ಭಾಟಿಯಾ ಹಾಗೂ ರಶ್ಮಿಕಾ ಮಂದಣ್ಣ ಸಂಗೀತ ರಸಮಂಜರಿಯ ರಸದೌತಣವನ್ನೇ ನೀಡಿದ್ರು.
ಕಾರ್ಯಕ್ರಮದ ಆರಂಭದಲ್ಲಿ ಅರಿಜಿತ್ ಸಿಂಗ್ ಹಾಡು ಅಲ್ಲಿ ನೆರೆದವರನ್ನು ರಂಜಿಸಿದ್ರೆ, ತಮನ್ನಾ ಭಾಟಿಯಾ ಒಂದಷ್ಟು ಹಾಡುಗಳಿಗೆ ಸ್ಟೆಪ್ಸ್ ಹಾಕಿ ಜನರನ್ನು ಮೋಡಿ ಮಾಡಿದ್ರು. ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ವೇದಿಕೆ ಕಾಲಿಟ್ಟ ತಕ್ಷಣ ಇಡೀ ಕ್ರೀಡಾಂಗಣವೇ ಕುಣಿದು ಕುಪ್ಪಳಿಸಿತು.
ಪುಷ್ಪಾ ಚಿತ್ರದ ಸಾಮಿ, ಶ್ರೀವಲ್ಲಿ ಮತ್ತು ಆಸ್ಕರ್ ಗೆದ್ದ ನಾಟು ನಾಟು ಹಾಡಿಗೆ ರಶ್ಮಿಕಾ ಸೊಂಟ ಬಳುಕಿಸುತ್ತಿದ್ರೆ ಪ್ರೇಕ್ಷಕರು ಜೋಶ್‌ನಲ್ಲಿ ಕುಣಿದಾಡಿದ್ರು.