ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್, ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕೊಡಗಿನ ಕುವರಿ. ಇವರು ಗೀತಾ ಗೋವಿಂದ, ಡಿಯರ್ ಕಾಮ್ರೆಡ್ ನಟ ವಿಜಯ ದೇವರಕೊಂಡ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿತ್ತು. ಇದಕ್ಕೆ ರಶ್ಮಿಕಾ ಮಂದಣ್ಣ ವಿಜಯ ದೇವರಕೊಂಡ ನನ್ನ ಬೆಸ್ಟ್ ಫ್ರೆಂಡ್ ಎಂದು ಹೇಳಿದ್ದರು.
ಈ ಎಲ್ಲಾ ಗಾಸಿಪ್ ಮತ್ತು ಸ್ಪಷ್ಟನೆಗಳ ನಡುವೆ ರಶ್ಮಿಕಾ ಮತ್ತೊಬ್ಬರ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಗುಸು ಗುಸು ಕೇಳಿ ಬರುತ್ತಿದೆ. ನಿಜ ರಶ್ಮಿಕಾ ಟಾಲಿವುಡ್ ಹೀರೋ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜೊತೆ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಯಾಕೆಂದರೆ ಇವರಿಬ್ಬರು ಹಲವೆಡೆ ಒಟ್ಟಿಗೆ ಕಾಣಿಸಿಕೊಂಡಿದ್ದೇ ಕಾರಣ. ಇತ್ತೀಚೆಗೆ ರಶ್ಮಿಕಾ ಹಾಗೂ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಮುಂಬೈ ಏರ್‌ಪೋರ್ಟ್‌ನಲ್ಲಿ ಒಟ್ಟಾಗಿ ಕಾಣಿಸಿಕೊಂಡು ಪಾಪರಾಜಿಗಳಿಗೆ ಪೋಸ್ ನೀಡಿದ್ದರು. ಅಷ್ಟೇ ಅಲ್ಲ ಅವಾರ್ಡ್ ಫಂಕ್ಷನ್‌ನಲ್ಲೂ ಈ ಜೋಡಿ ಜೊತೆಯಾಗಿ ಹಾಜರಿ ಹಾಕಿದೆ.
ಇನ್ನು ಇವರಿಬ್ಬರು ಯಾವ ಸಿನಿಮಾದಲ್ಲೀ ಒಟ್ಟಾಗಿ ನಟಿಸಿಲ್ಲ. ಹಾಗಿದ್ದರೂ ರಶ್ಮಿಕಾಗೆ ಇವರ ಪರಿಚಯ ಹೇಗೆ? ಇವರಿಬ್ಬರು ಮೊದಲೇ ಪರಿಚಯಸ್ಥರೇ? ಎಂಬೆಲ್ಲಾ ಪ್ರಶ್ನೆಗಳು ಎದ್ದಿವೆ. ಇದಕ್ಕೆ ರಶ್ಮಿಕಾಯಾಗಲೀ, ಸಾಯಿ ಶ್ರೀನಿವಾಸ್‌ಯಾಗಲಿ ತುಟಿ ಬಿಚ್ಚಿಲ್ಲ.
ಒಟ್ಟಿನಲ್ಲಿ ಇದೀಗ ಇವರಿಬ್ಬರ ಸುತ್ತಾಟ ವಿಜಯ ದೇವರಕೊಂಡ ಅಭಿಮಾನಿಗಳಲ್ಲಿ ಬೇಸರ ತರಿಸಿದೆ.