ಬೆಂಗಳೂರು : ಚಿನ್ನದ ಕಳ್ಳಿ ರನ್ಯಾ ರಾವ್ ಗೆ ಇವತ್ತು ನಿರ್ಣಾಯಕ ದಿನವಾಗಿದ್ದು, ಗೋಲ್ಡ್ ಸ್ಮಗ್ಲಿಂಗ್ ಕೇಸ್ ಸಂಬಂಧ ಸಲ್ಲಿಸಲಾಗಿರುವ ಜಾಮೀನು ಅರ್ಜಿಯ ತೀರ್ಪು ಹೊರಬೀಳಲಿದೆ.
ದುಬೈನಿಂದ ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ 64ನೇ ಸಿಸಿಎಚ್ ನ್ಯಾಯಾಲಯದಲ್ಲಿ ಆರೋಪಿ ನಟಿ ರನ್ಯಾರಾವ್ ಸಲ್ಲಿಸಿದ ಜಾಮೀನು ಅರ್ಜಿ ಕುರಿತು ಇವತ್ತು ತೀರ್ಪು ಪ್ರಕಟವಾಗಲಿದೆ.
ಮಾರ್ಚ್ 25 ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ನಲ್ಲಿ DRI ಪರ ವಕೀಲ ಮಧು ರಾವ್ ವಾದ ಮಾಡಿದ್ದರು. ಇದು ಕಾಗ್ನಿಸಬಲ್ ಅಪರಾಧವಾಗಿದೆ ಹಾಗೂ ಜಾಮೀನು ರಹಿತವಾಗಿದೆ. ನಟಿ ರನ್ಯಾ ಚಿನ್ನದ ಜೊತೆಗೆ ದುಬೈನಿಂದ ಆಗಮಿಸಿದ್ದಾರೆ. ಬೆಂಗಳೂರು ಏರ್ಪೋರ್ಟ್ಗೆ ಸಂಜೆ 6:30ಕ್ಕೆ ಲ್ಯಾಂಡ್ ಆಗಿದ್ದಾರೆ. ಅಂದರೆ ರಮ್ಯಾ ರಾನ್ ಗ್ರೀನ್ ಚಾನಲ್ ಮೂಲಕ ಬರುತ್ತಿದ್ದಾರೆ ಎಂದು ಅರ್ಥ ಎಂದು ವಾದಿಸಿದ್ದರು. ಚೆಕ್ಕಿಂಗ್ ವೇಳೆ ಆಕೆ ಚಿನ್ನ ತಂದಿರೋದು ಸಾಬೀತಾಗಿದೆ. ಯಾವುದೇ ಕಾರಣಕ್ಕೂ ಜಾಮೀನು ಕೊಡಬಾರದು ಎಂದು ವಾದಿಸಿದ್ದರು.
ಬಳಿಕ ಪ್ರತಿವಾದ ಮಾಡಿದ ರನ್ಯಾ ರಾವ್ ಪರ ವಕೀಲ ಕಿರಣ್ ಜವಳಿ, ಪೊಲೀಸರು ನೋಟಿಸ್ ನೀಡಿದ್ದೇವೆ .ಪಂಚನಾಮೆ ಮಾಡಿದ್ದೇವೆ ಅಂತಾರೆ ಆದರೆ ಆರೋಪಿಯಿಂದ ಒಪ್ಪಿಗೆ ಎಲ್ಲಿ ಪಡೆದಿದ್ದಾರೆ? ಎಂದು ಪ್ರಶ್ನಿಸಿದರು.
ವಾದ ಪ್ರತಿವಾದ ನಂತರ ನ್ಯಾಯಾಧೀಶರು ರನ್ಯಾ ರಾವ್ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿದ್ದು, ಇವತ್ತು ಜಾಮೀನು ಕೌತುಕಕ್ಕೆ ತೆರೆಬೀಳಲಿದೆ.