ಬೆಂಗಳೂರು : ಡಿಜಿಪಿ ರಾಮಚಂದ್ರ ರಾವ್ ಅವರ ಮಲಮಗಳು ರನ್ಯಾ ರಾವ್ ಚಿನ್ನ ಕಳ್ಳಸಾಗಾಣಿಕೆಯ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಪ್ರೋಟೋಕಾಲ್ ನೀಡಲು ವಿಮಾನ ನಿಲ್ದಾಣಕ್ಕೆ ತೆರಳಿ ರನ್ಯಾರನ್ನು ಕರೆತರುತ್ತಿದ್ದ ಪೊಲೀಸ್ ಅಧಿಕಾರಿ ಬಸವರಾಜ್ ಗೆ ಸರ್ಕಾರ ಕಡ್ಡಾಯ ರಜೆ ನೀಡಿ ಮನೆಗೆ ಕಳುಹಿಸಿದೆ.
ಏರ್ ಪೋರ್ಟ್ ನಲ್ಲಿ ಯಾವುದೇ ತಪಾಸಣೆಯಿಲ್ಲದೇ ಚಿನ್ನ ಸಾಗಿಸಲು ತನ್ನ ತಂದೆಯ ಪ್ರಭಾವ ಬಳಸುತ್ತಿದ್ದ ಸಂಗತಿ ಈಗಲೇ ಬಯಲಾಗಿದೆ. ಕಡ್ಡಾಯ ರಜೆಯ ಮೇಲೆ ಮನೆಗೆ ಹೋಗಿರುವ ಬಸವರಾಜ್ ಕೂಡ ಡಿಜಿಪಿ ರಾಮಚಂದ್ರ ರಾವ್ ಅವರ ಆದೇಶದ ಮೇರೆಗೆ ತಾನು ರನ್ಯಾಗೆ ಪ್ರೋಟೋಕಾಲ್ ನೀಡಲು ಹೋಗಿದ್ದೆ ಎಂದು ಒಪ್ಪಿಕೊಂಡಿದ್ದು, ಸಿಬಿಐ ತನಿಖೆಯಲ್ಲೂ ಇವರ ಪಾಥ್ರ ಬಯಲಗಿದೆ. ಹೀಗಾಗಿ ಸರ್ಕಾರ ಬಸವರಾಜ್ ಗೆ ಕಡ್ಡಾಯ ರಜೆ ನೀಡಿದೆ.
ಮತ್ತೊಂದೆಡೆ ರನ್ಯಾ ರಾವ್ ಕೇಸ್ ಬೆನ್ನಲ್ಲೇ ಚಿನ್ನದ ವ್ಯಾಪಾರಿಗಳಿಗೂ ನಡುಕ ಶುರುವಾಗಿದೆ. ರನ್ಯಾ ತರುತ್ತಿದ್ದ ಚಿನ್ನವನ್ನು ಕೊಳ್ಳುತಿದ್ದರು ಎನ್ನಲಾದ ಹಲವು ಆಭರಣ ವ್ಯಾಪಾರಿಗಳ ಮೇಲೆ ಐಟಿ ದಾಳಿ ನಡೆಸಿತ್ತು.
ಆಗ ಅಕ್ರಮವಾಗಿ ಸಂಗ್ರಹಿಸಿದ, ದಾಖಲೆಗಳಿಲ್ಲದ ಚಿನ್ನ ಪತ್ತೆಯಾಗಿತ್ತು. ಈಗ ಐಟಿ ಇಲಾಖೆ ಈ ಬಗ್ಗೆಯೂ ತನಿಖೆ ಕೈಗೊಂಡಿದೆ.
ರನ್ಯಾ ರಾವ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಇಂದು ಮಧ್ಯಾಹ್ನ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.