Thursday, March 27, 2025
Homeಟಾಪ್ ನ್ಯೂಸ್RAMZAN GIFT : ಆಂಧ್ರ ಮುಸ್ಲಿಮರಿಗೆ ಸಿಎಂ ಚಂದ್ರಬಾಬು ಗಿಫ್ಟ್! ರಂಜಾನ್ ತಿಂಗಳಲ್ಲಿ ಕೆಲಸದ ಅವಧಿ...

RAMZAN GIFT : ಆಂಧ್ರ ಮುಸ್ಲಿಮರಿಗೆ ಸಿಎಂ ಚಂದ್ರಬಾಬು ಗಿಫ್ಟ್! ರಂಜಾನ್ ತಿಂಗಳಲ್ಲಿ ಕೆಲಸದ ಅವಧಿ ಕಡಿತ!

ಹೈದ್ರಾಬಾದ್ : ಇಸ್ಲಾಂ ನ ಪವಿತ್ರ ರಂಜಾನ್ ಹಬ್ಬ ಇನ್ನೇನು ಸಮೀಪಿಸುತ್ತಿದೆ. ಈ ನಡುವೆ ಮುಸ್ಲಿಂ ಸಮುದಾಯಕ್ಕೆ ಆಂಧ್ರ ಪ್ರದೇಶ ಸರ್ಕಾರ ಸಿಹಿ ಸುದ್ದಿ ಸಿಗುತ್ತಿದೆ.

ಮುಸ್ಲಿಂ ಉದ್ಯೋಗಿಗಳು ಪವಿತ್ರ
ರಂಜಾನ್‌ ತಿಂಗಳಲ್ಲಿ ಒಂದು ಗಂಟೆ ಮುಂಚಿತವಾಗಿ ಕೆಲಸ ಮುಗಿಸಬಹುದು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಅಧಿಕೃತ ಸೂಚನೆ ಹೊರಡಿಸಿದೆ.

ತೆಲಂಗಾಣದ ಕಾಂಗ್ರೆಸ್ ಸರ್ಕಾರ ಮೊದಲಿಗೆ ಈ ಆದೇಶವನ್ನು ಹೊರಡಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಸಿಎಂ ಚಂದ್ರಬಾಬು ನಾಯ್ಡು ಈ ನಿರ್ಧಾರ ಕೈಗೊಂಡಿದ್ದಾರೆ.ತೆಲಂಗಾಣ ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ತುಷ್ಟಿಕರಣ ರಾಜಕೀಯ ಎಂದು ವ್ಯಂಗ್ಯವಾಗಿ ಟೀಕಿಸಿತ್ತು. ಈಗ ಆಂಧ್ರದಲ್ಲೂ ಈ ನಿರ್ಧಾರ ಕೈಗೊಳ್ಳಲಾಗಿದ್ದು,ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದೆ.

ತೆಲಂಗಾಣ ಸರಕಾರವು ಶಿಕ್ಷಕರು, ಗುತ್ತಿಗೆ ಕಾರ್ಮಿಕರು ಮತ್ತು ಸಾರ್ವಜನಿಕ ವಲಯದ ಸಿಬ್ಬಂದಿ ಸೇರಿದಂತೆ ಮುಸ್ಲಿಂ ಉದ್ಯೋಗಿಗಳಿಗೆ ಅಗತ್ಯ ಕರ್ತವ್ಯಗಳನ್ನು ಹೊರತುಪಡಿಸಿ ಮಾರ್ಚ್ 2 ರಿಂದ ಮಾರ್ಚ್ 31 ರವರೆಗೆ ಸಂಜೆ 4 ಗಂಟೆಗೆ ಕೆಲಸ ಮುಗಿಸಿ ಹೊರಡಲು ಅನುಮತಿ ನೀಡಿತ್ತು. ಈಗ ಅದೇ ಆದೇಶವನ್ನು ಆಂಧ್ರ ಸರ್ಕಾರ ಸಹ ಘೋಷಿಸಿದೆ.

ಹೆಚ್ಚಿನ ಸುದ್ದಿ

error: Content is protected !!