Wednesday, February 19, 2025
Homeಟಾಪ್ ನ್ಯೂಸ್ಇಂದಿನಿಂದ ರಂಜಾನ್ ಉಪವಾಸ ಆರಂಭ

ಇಂದಿನಿಂದ ರಂಜಾನ್ ಉಪವಾಸ ಆರಂಭ

ಬೆಂಗಳೂರು: ಮುಸಲ್ಮಾರ ಪ್ರಮುಖ ಆಚರಣೆ ರೋಜಾ ಇಂದಿನಿಂದ ಪ್ರಾರಂಭವಾಗಿದೆ. ರಾಜ್ಯ ಹಾಗೂ ದೇಶಾದ್ಯಂತ ಇಂದಿನಿಂದ ರಂಜಾನ್​ ಉಪವಾಸ ಆರಂಭವಾಗಿದ್ದು, ಮಾರ್ಚ್  23ರ ಗುರುವಾರ ಸಂಜೆ ರಾಜ್ಯದಲ್ಲಿ ಚಂದ್ರನ ದರ್ಶನವಾಗಿದೆ. ಹೀಗಾಗಿ ಶಬಾನ್ ತಿಂಗಳು ಮುಗಿದು ರಂಜಾನ್ ತಿಂಗಳು ಆರಂಭವಾಗಿದೆ. ಮಾರ್ಚ್ 24 ರಿಂದ ಬೆಂಗಳೂರು, ಮಂಗಳೂರು, ಮೈಸೂರು, ಧಾರವಾಡ ಮತ್ತು ಕರ್ನಾಟಕದ ಇತರ ನಗರಗಳಲ್ಲಿ ಮೊದಲ ಉಪವಾಸ ಆಚರಿಸಲಾಗುತ್ತಿದ್ರೆ ರಾಜ್ಯದ ಕರಾವಳಿ, ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ರಂಜಾನ್ ಮಾರ್ಚ್ 23ರಿಂದಲೇ ಪ್ರಾರಂಭವಾಗಿದೆ.

ಲೂನಾರ್ ಕ್ಯಾಲೆಂಡರ್ ಪ್ರಕಾರ ಮುಸಲ್ಮಾನರು ಈ ವ್ರತವನ್ನು ಆಚರಸುತ್ತಾರೆ.  ಚಂದ್ರದರ್ಶನದ ನಂತರ ಪ್ರಾರಂಭವಾಗುವ ಉಪವಾಸ ಒಂದು ತಿಂಗಳವರೆಗೂ ನಡೆಯುತ್ತದೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ಮುಂಜಾನೆಯಿಂದ ಸಂಜೆವರೆಗೂ ಆಹಾರ ನೀರನ್ನು ತ್ಯಜಿಸಿ ಉಪವಾಸ ಆಚರಿಸುತ್ತಾರೆ. ರಂಜಾನ್‌ ಉಪವಾಸವು ಸ್ವಯಂ-ಶಿಸ್ತು ಮತ್ತು ಸಂಯಮವನ್ನು ರೂಢಿಸಿಕೊಲ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದ್ದು, ಉಪವಾಸ ಆಚರಣೆ ಇಸ್ಲಾಂ ಧರ್ಮದ ಐದು ಪ್ರಮುಖ ಅಂಶಗಳಲ್ಲಿ ಒಂದಾಗಿದೆ.  ಚಿಕ್ಕ ಮಕ್ಕಳು, ರೋಗಿಗಳು, ಪ್ರಯಾಣಿಕರು ಮತ್ತು ಗರ್ಭಿಣಿ, ಹಾಲುಣಿಸುವ ಅಥವಾ ಮುಟ್ಟಾಗುವ ಸಮಯದಲ್ಲಿ ಮಹಿಳೆಯರು ಉಪವಾಸ ಆಚರಿಸುವಂತಿಲ್ಲ. ಈ ಆಚರಣೆ ವೇಳೆ ಬಡವರಿಗೆ ಝಕಾತ್ ಅಂದರೆ ದಾನ ನೀಡುವುದೂ ಪ್ರಮುಖ ಅಂಶ.

ನಗರಸಹರಿಇಫ್ತಾರ್
ಬೆಂಗಳೂರುಬೆಳಿಗ್ಗೆ 5:10ಸಂಜೆ 6:32
ಮಂಗಳೂರುಬೆಳಗ್ಗೆ 5:21ಸಂಜೆ 6:43
ಮೈಸೂರುಬೆಳಗ್ಗೆ 5:14ಸಂಜೆ 6:34
ಧಾರವಾಡಬೆಳಗ್ಗೆ 5:19ಸಂಜೆ 6:42
ರಾಜ್ಯದ ವಿವಿಧ ನಗರಗಳಲ್ಲಿ ರಂಜಾನ್ ಆಚರಣೆ ವೇಳಾ ಪಟ್ಟಿ

ಹೆಚ್ಚಿನ ಸುದ್ದಿ

error: Content is protected !!