Monday, February 9, 2026
Homeಟಾಪ್ ನ್ಯೂಸ್ರಶ್ಮಿಕಾ ಬರ್ತಡೇಗೆ ರಕ್ಷಿತ್ ನಿರ್ಮಾಣ ಸಂಸ್ಥೆ ವಿಶ್

ರಶ್ಮಿಕಾ ಬರ್ತಡೇಗೆ ರಕ್ಷಿತ್ ನಿರ್ಮಾಣ ಸಂಸ್ಥೆ ವಿಶ್

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇಂದು 27ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ರಕ್ಷಿತ್ ಶೆಟ್ಟಿ ಒಡೆತನದ ಪರಂವಃ ಸ್ಟುಡಿಯೋಸ್ ಕಡೆಯಿಂದ ರಶ್ಮಿಕಾ ಮಂದಣ್ಣಗೆ ವಿಶ್ ಮಾಡಿದೆ. ಈ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಇದು ಎಷ್ಟು ಸರಿ ಎನ್ನುವ ಪ್ರಶ್ನೆ ಅನೇಕರಿಂದ ಉದ್ಭವ ಆಗಿದೆ. ಅನೇಕರು ರಕ್ಷಿತ್ ಶೆಟ್ಟಿ ಅವರದ್ದು ದೊಡ್ಡ ಗುಣ ಎಂದು ಹೇಳಿದ್ದಾರೆ. ಸದ್ಯ ಪರಂವಃ ಸ್ಟುಡಿಯೋಸ್ ಮಾಡಿರೋ ಟ್ವೀಟ್ ವೈರಲ್ ಆಗಿದೆ.

2016ರಲ್ಲಿ ತೆರೆಗೆ ಬಂದ ‘ಕಿರಿಕ್ ಪಾರ್ಟಿ’ ಚಿತ್ರವನ್ನು ಪರಂವಃ ಸ್ಟುಡಿಯೋಸ್ ಹಾಗೂ ಪುಷ್ಕರ್ ಫಿಲ್ಮ್ಸ್ ಒಟ್ಟಾಗಿ ನಿರ್ಮಾಣ ಮಾಡಿತ್ತು. ಈ ಚಿತ್ರದಿಂದ ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಮೊದಲಾದವರಿಗೆ ದೊಡ್ಡ ಬ್ರೇಕ್ ಸಿಕ್ಕಿತು. ಹಲವು ಆಫರ್​ಗಳು ಇವರನ್ನು ಹುಡುಕಿ ಬಂದವು. ರಕ್ಷಿತ್ ಹಾಗೂ ರಶ್ಮಿಕಾ ಮಂದಣ್ಣ ಪ್ರೀತಿ ಶುರುವಾಗಿದ್ದು ಇದೇ ಸಿನಿಮಾದಿಂದ. ಇಬ್ಬರೂ ಹಲವು ಸಮಯ ಪ್ರೀತಿಯಲ್ಲಿದ್ದರು. ಇವರ ನಿಶ್ಚಿತಾರ್ಥ ಕೂಡ ಆಯಿತು. ಆದರೆ, ಈ ಎಂಗೇಜ್​ಮೆಂಟ್ ಹೆಚ್ಚು ದಿನ ಉಳಿಯಲೇ ಇಲ್ಲ. ಇವರ ಸಂಬಂಧ ಮುರಿದುಬಿತ್ತು.

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಎಂಗೇಜ್​ಮೆಂಟ್ ಮುರಿದುಕೊಂಡ ಬಗ್ಗೆ ಘೋಷಣೆ ಮಾಡಿದರು. ರಶ್ಮಿಕಾ ಆಗಲೇ ದೊಡ್ಡ ಮಟ್ಟದ ಹೆಸರು ಮಾಡಿದ್ದರು. ‘ರಶ್ಮಿಕಾ ಮಂದಣ್ಣ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ರಕ್ಷಿತ್. ಆದರೆ, ಈಗ ರಕ್ಷಿತ್​ಗೆ ರಶ್ಮಿಕಾ ಮೋಸ ಮಾಡಿದ್ದಾರೆ’ ಎಂದು ಅನೇಕರು ಮಾತನಾಡಿಕೊಂಡರು. ರಕ್ಷಿತ್ ಅಭಿಮಾನಿಗಳಿಗೆ ರಶ್ಮಿಕಾ ಮೇಲೆ ದ್ವೇಷ ಹುಟ್ಟೋಕೆ ಇದು ಕೂಡ ಪ್ರಮುಖ ಕಾರಣ ಆಯಿತು.

ರಶ್ಮಿಕಾ ಮಂದಣ್ಣ ಅವರಿಗೆ ಶುಭಾಶಯ ತಿಳಿಸಿ ಪರಂವಃ ಸ್ಟುಡಿಯೋಸ್ ಟ್ವೀಟ್ ಮಾಡಿದೆ. ರಶ್ಮಿಕಾ ಮಂದಣ್ಣ ಫೋಟೋ ಹಾಕಿ, ‘ಗಾರ್ಜಿಯಸ್ ರಶ್ಮಿಕಾ ಮಂದಣ್ಣಗೆ ಹುಟ್ಟುಹಬ್ಬದ ಶುಭಾಶಯ. ಈ ವರ್ಷ ನಿಮಗೆ ಸಂತೋಷ, ನಗು ಮತ್ತು ಯಶಸ್ಸು ಹೆಚ್ಚಾಗಲಿ’ ಎಂದು ಪರಂವಃ ಸ್ಟುಡಿಯೋಸ್ ಟ್ವೀಟ್ ಮಾಡಿದೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!