ಕಳೆದ ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ 50 ವರ್ಷದ ಮಹಿಳೆಯ ಕತ್ತರಿಸಿದ ದೇಹದ ಭಾಗಗಳು ರಾಜಸ್ಥಾನದ ಜೋಡರ್ ಜೋಧ್‌ಪುರದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ.
ಕಳೆದೆರಡು ದಿನಗಳ ಹಿಂದೆ ಎಂದಿನಂತೆ ಮೃತ ಅನಿತಾ ದೇವಿ (50) ಎಂಬುವವರು ತಮ್ಮ ಬ್ಯೂಟಿ ಪಾರ್ಲರ್ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದರು, ಆದರೆ ಮನೆಗೆ ತಲುಪಿರಲಿಲ್ಲ. ಈ ಬಗ್ಗೆ ಪತಿ ಮನಮೋಹನ್ ಚೌಧರಿ (56) ಪೊಲೀಸರಿಗೆ ನಾಪತ್ತೆ ದೂರು ನೀಡಿದರು.
ಮನಮೋಹನ್ ಚೌಧರಿ ನೀಡಿದ ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರು, ರಾತ್ರಿಯೇ ಹುಡುಕಾಟ ಆರಂಭಿಸಿದ್ದಾರೆ. ಎರಡು ದಿನಗಳ ಕಾಲ ಶೋಧ ಕಾರ್ಯ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯವನೆಲ್ಲ ಪತ್ತೆ ಹಚ್ಚಿ, ಬಳಿಕ ಅನಿತಾ ಅಂಗಡಿಗೆ ಬೀಗ ಹಾಕಿ ಆಟೋ ಮೂಲಕ ಹೋಗಿರುವುದು ಗೊತ್ತಾಗುತ್ತದೆ.
ಕೂಡಲೇ ಆಟೋ ಚಾಲಕನನ್ನು ಪತ್ತೆ ಹಚ್ಚಿ ವಿಚಾರಣೆಯನ್ನು ನಡೆಸಿದ್ದಾರೆ. ಈ ವೇಳೆ ಅನಿತಾಳನನ್ನು ಗಂಗಾನಾ ವಲಯಕ್ಕೆ ಬಿಟ್ಟಿರುವುದಾಗಿ ತಿಳಿಸಿದ್ದಾನೆ. ಈ ವೇಳೆ ವಿಚಾರಣೆ ನಡೆಸಿದಾಗ ಮೃತ ಅನಿತಾಳ ಹಳೆಯ ಸ್ನೇಹಿತ ಮೊಹಮ್ಮದ್ ಗುಲಾಮುದ್ದೀನ್ ಈ ಕೃತ್ಯ ಎಸಗಿರುವುದು ತಿಳಿದುಬಂದಿದೆ.
ಕೂಡಲೇ ಆರೋಪಿ ಮೊಹಮ್ಮದ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಈ ವೇಳೆ ಕೊಲೆಯ ಬಗ್ಗೆ ಬಾಯ್ಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ ಈ ಹಿಂದೆ ಹಲವಾರು ಮಹಿಳೆಯರನ್ನು ವಂಚಿಸಿದ್ದ ಎಂದು ವರದಿಯಾಗಿದೆ.
ಸದ್ಯ ಮೃತ ದೇಹವನ್ನು ಸ್ಥಳೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.