ರಾಯಚೂರು : ಬ್ಯಾಂಕಿನಿಂದ ಹಣ ಡ್ರಾ ಮಾಡಿ ಬರುತ್ತಿದ್ದ ರೈತನೊಬ್ಬರನ್ನು ಹಿಂಬಾಲಿಸಿ ಬಂದ ಖದೀಮರು ಆತನ ಗಮನ ಬೇರೆಡೆಯಿರುವಾಗ ಹಣದ ಚೀಲ ಕಸಿದು ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ.
ಮೆಣಸಿನ ಕಾಯಿ ಮಾರಾಟ ಮಾಡಿದ್ದ ಹಣವನ್ನು ಬ್ಯಾಂಕ್ ಡ್ರಾ ಮಾಡಿಕೊಂಡಿದ್ದ ರೈತರೊಬ್ಬರು ಮನೆಯೆಡೆಗೆ ಬೈಕ್‌ನಲ್ಲಿ ಧಾವಿಸುತ್ತಿದ್ದರು. ಇವರು ಏಳು ಲಕ್ಷ ಹಣ ಡ್ರಾಮಾಡಿದ್ದು ಗಮನಿಸಿದ ಖದೀಮರು ಅವರನ್ನೇ ಹಿಂಬಾಲಿಸಿಕೊಂಡು ಬಂದಿದ್ದರು. ದಾರಿಯ ಮಧ್ಯದಲ್ಲದಿ ರೈತರು ಹಣ್ಣು ಖರೀದಿಗೆಂದು ವಾಹನ ನಿಲ್ಲಿಸಿದಾಗ ಹಿಂದಿನಿಂದ ಬಂದು ಬ್ಯಾಗ್ ಲಪಟಾಯಿಸಿ ಬೈಕಿನಲ್ಲಿ ಪರಾರಿಯಾಗಿದ್ದರು. ಇವರು ಹಣ್ಣು ಖರೀದಿ ಮುಗಿಸಿಹಿಂದಿರುಗಿದಾಗ ಬ್ಯಾಗ್ ನಾಪತ್ತೆಯಾಗಿರುವುದು ಗೊತ್ತಾಗಿತ್ತು.
ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಬ್ಬೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.