Wednesday, February 19, 2025
Homeದೇಶಲಂಡನ್‌ನಲ್ಲಿ ರಾಹುಲ್‌ ಗಾಂಧಿ ನೀಡಿದ ಹೇಳಿಕೆಗೆ ಸಂಸತ್ತಿನಲ್ಲಿ ಕೋಲಾಹಲ: ಕಲಾಪ ಮುಂದೂಡಿಕೆ

ಲಂಡನ್‌ನಲ್ಲಿ ರಾಹುಲ್‌ ಗಾಂಧಿ ನೀಡಿದ ಹೇಳಿಕೆಗೆ ಸಂಸತ್ತಿನಲ್ಲಿ ಕೋಲಾಹಲ: ಕಲಾಪ ಮುಂದೂಡಿಕೆ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಲಂಡನ್‌ನಲ್ಲಿ ʼಭಾರತದ ಪ್ರಜಾಪ್ರಭುತ್ವದʼ ಬಗ್ಗೆ ಕಾಳಜಿ ವ್ಯಕ್ತಪಡಿಸಿ ನೀಡಿದ ಹೇಳಿಕೆ ಸಂಸತ್ತಿನಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ಬಜೆಟ್ ಅಧಿವೇಶನದ ಎರಡನೇ ದಿನದಂದು ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ನಾಯಕರು ವಿಪಕ್ಷ ಕಾಂಗ್ರೆಸ್‌ ಅನ್ನು ತೀವ್ರ ತರಾಟೆಗೆ ಎತ್ತಿಕೊಂಡಿದ್ದಾರೆ. ಸಂಸತ್ತಿನಲ್ಲಿ ಉಂಟಾದ ಗದ್ದಲದ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳ ಕಾರ್ಯ ಕಲಾಪಗಳನ್ನು ಮುಂದೂಡಿಕೆ ಮಾಡಲಾಗಿದೆ.

ಮೇಲ್ಮನೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಭಾನಾಯಕ ಪಿಯೂಷ್ ಗೋಯಲ್, ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ವಿದೇಶದಲ್ಲಿ ಲಜ್ಜೆಯಿಲ್ಲದ ರೀತಿಯಲ್ಲಿ ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದರು. ರಾಹುಲ್ ಅವರ ಹೆಸರನ್ನು ಉಲ್ಲೇಖಿಸದ ಅವರು, ʼವಿರೋಧ ಪಕ್ಷದ ನಾಯಕರು ವಿದೇಶಿ ನೆಲದಲ್ಲಿ ಭಾರತೀಯ ಸೇನೆ, ಭಾರತೀಯ ಸಂಸತ್ತು, ಲೋಕಸಭಾ ಸ್ಪೀಕರ್, ಚುನಾವಣಾ ಆಯೋಗ, ನ್ಯಾಯಾಂಗ ಮತ್ತು ಭಾರತದ ಮಾಧ್ಯಮಗಳನ್ನು ಅವಮಾನಿಸಿದ್ದಾರೆʼ ಎಂದು ಆರೋಪಿಸಿದ್ದಾರೆ.

”ವಿರೋಧ ಪಕ್ಷದ ನಾಯಕರೊಬ್ಬರು ವಿದೇಶಿ ನೆಲದಲ್ಲಿ ಭಾರತೀಯರ ಭಾವನೆಗಳಿಗೆ ಹೇಗೆ ನೋವುಂಟು ಮಾಡಿದ್ದಾರೆ ಎಂಬುದನ್ನು ಇಡೀ ದೇಶವೇ ನೋಡಿದೆ. ಅವರು ದೇಶದ ಮತ್ತು ಪ್ರತಿಯೊಬ್ಬ ಭಾರತೀಯನ ಕ್ಷಮೆ ಕೇಳಬೇಕು. ಅವರು ಸೇನೆಯ ಕ್ಷಮೆ ಕೇಳಬೇಕು. ಅವರು ಸದನಕ್ಕೆ ಬಂದು (ಭಾರತದ) ಪ್ರಜಾಪ್ರಭುತ್ವದ ಬಗ್ಗೆ ಅವರು ಮಾಡಿದ ಟೀಕೆಗಳಿಗಾಗಿ ಸೇನೆ, ಮಾಧ್ಯಮ ಮತ್ತು ನ್ಯಾಯಾಂಗದ ಕ್ಷಮೆಯಾಚಿಸಬೇಕು ”ಎಂದು ಗೋಯಲ್ ಹೇಳಿದರು.

ಮಾಧ್ಯಮಗಳು, ನ್ಯಾಯಾಂಗ, ಭದ್ರತಾ ಸಂಸ್ಥೆಗಳು ಮತ್ತು ಚುನಾವಣಾ ಆಯೋಗವನ್ನು ಯಾರೋ ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿರುವ ವಿರೋಧ ಪಕ್ಷದ ನಾಯಕರು ಕ್ಷಮೆಯಾಚಿಸಬೇಕು ಎಂದು ಗೋಯಲ್ ಆಗ್ರಹಿಸಿದರು.

ಹೆಚ್ಚಿನ ಸುದ್ದಿ

error: Content is protected !!