ಬೆಂಗಳೂರು : ಕೋಲಾರದಲ್ಲಿ ಏಪ್ರಿಲ್ 10ನೇ ತಾರೀಕಿನಂದು ನಡೆಯಬೇಕಿದ್ದ ರಾಹುಲ್ ಗಂಧಿಯವರ `ಸತ್ಯಮೇವ ಜಯತೇ’ ಕಾರ್ಯಕ್ರಮ ಮುಂದೂಡಿಕೆಯಾಗಿದೆ.
ಏಪ್ರಿಲ್ 10ನೇ ತಾರೀಕಿನ ಬದಲು ಏಪ್ರಿಲ್ 16ರಂದು ಕಾರ್ಯಕ್ರಮ ನಡೆಸಲು ಚಿಂತಿಸಲಾಗಿದೆ.
ಮೊದಲು ಏಪ್ರಿಲ್ 5ನೇ ತಾರೀಕಿನಂದು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರಣಾಂತರಗಳಿಂದ 9ನೇ ತಾರೀಕಿಗೆ ನಿಗದಿ ಮಾಡಲಾಯ್ತು. ತದನಂತರ ಕಾರ್ಯಕ್ರಮ ಏಪ್ರಿಲ್ 10ಕ್ಕೆ ಮುಂದೂಡಲ್ಪಟ್ಟಿತ್ತು. ಇದೀಗ ಮತ್ತೆ ಸತ್ಯಮೇವ ಜಯತೇ ಕಾರ್ಯಕ್ರಮ ಏಪ್ರಿಲ್ 16 ಕ್ಕೆ ಮುಂದೂಡಲ್ಪಟ್ಟಿದೆ ಎಂದು ಹೇಳಲಾಗ್ತಿದೆ. ಕಾರ್ಯಕ್ರಮ ಮುಂದೂಡಿಕೆಗೆ ಯಾವುದೇ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
2019ರಲ್ಲಿ ಕೋಲಾರದಲ್ಲಿ ರಾಹುಲ್ ಗಾಂಧಿ ಮೋದಿ ಉಪನಾಮದ ಬಳಕೆ ಮಾಡಿದ್ದಕ್ಕಾಗಿ ಅವರ ವಿರುದ್ಧ ಮಾನನಷ್ಟ ಕೇಸ್ ದಾಖಲಾಗಿ 2 ವರ್ಷ ಜೈಲು ಶಿಕ್ಷೆಯೊಂದಿಗೆ ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಂಡಿದ್ದಾರೆ.
ಬಿಜೆಪಿಯವರು ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೋರಾಟಕ್ಕಿಳಿದಿರುವ ರಾಹುಲ್ ಗಾಂಧಿ, ದೇಶದುದ್ದಗಲಕ್ಕೂ ಸತ್ಯಮೇವ ಜಯತೇ ಪ್ರತಿಭಟನೆ ಹಮ್ಮಿಕೊಳ್ಳಲು ಚಿಂತಿಸಿದ್ದು, ತಾವು ಎಲ್ಲಿ ಭಾಷಣ ಮಾಡಿದ್ದರೋ ಅದೇ ಭೂಮಿಯಿಂದ ಮತ್ತೆ ಪ್ರಜಾಪ್ರಭುತ್ವ ಉಳಿಸುವ ಹೋರಾಟ ಪ್ರಾರಂಭಿಸಬೇಕು ಎನ್ನುವುದು ರಾಹುಲ್ ಗಾಂಧಿ ಉದ್ದೇಶ.