ಮೋದಿ ಸರ್‌ನೇಮ್ ಪ್ರಕರಣದಲ್ಲಿ ತಪ್ಪಿತಸ್ಥ ಶಿಕ್ಷೆಗೆ ಗುರಿಯಾಗಿ, ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ ಎಪ್ರಿಲ್ 5 ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ.
ಕೋಲಾರದಲ್ಲಿ 2019 ರಲ್ಲಿ ಚುನವಾಣಾ ಪ್ರಚಾರ ವೇಳೆ ರಾಹುಲ್ ಮೋದಿ ಸಮುದಾಯವನ್ನು ನಿಂದಿಸಿದ್ದಾರೆ ಎಂದು ದೂರಲಾಗಿತ್ತು. ಇದಕ್ಕೆ ಕೋಲಾರದಿಂದಲೇ ಪ್ರತ್ಯುತ್ತರ ನೀಡಲು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿಯೂ ರಾಹುಲ್ ಭೇಟಿ ಮಹತ್ವ ಪಡೆದಿದೆ. ಪ್ರಚಾರದ ಹಿನ್ನೆಲೆ ಈಗಾಗಲೇ ರಾಹುಲ್ ಗಾಂಧಿ ಬೆಳಗಾವಿಗೆ ಬಂದಿದ್ದು, ಇದು ಎರಡನೇ ಬಾರಿಯ ಆಗಮನವಾಗಲಿದೆ
ಕೋಲಾರದಲ್ಲಿ ಮಾಡಿದ ಭಾಷಣದಿಂದ ರಾಹುಲ್ ಗಾಂಧಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹವಾಗಿದ್ದು, ರಾಹುಲ್ ಪರ ಮೃದು ದೋರಣೆಯೂ ಸೃಷ್ಟಿಯಾಗುತ್ತಿದೆ. ಹೀಗಾಗಿ ಕೋಲಾರದಿಂದಲೇ ಪ್ರಚಾರ ಆರಂಭಿಸಿ, ಅನರ್ಹಗೊಂಡಿದ್ದನ್ನೇ ಪ್ರಚಾರದ ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ.