ನವದೆಹಲಿ : ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul gandhi), ಯುವಕರು ಮತ್ತು ವಿದ್ಯಾರ್ಥಿಗಳು ಭಾರತದ ಮಾಧ್ಯಮಗಳ ಮುಂದೆ ಧೈರ್ಯವಾಗಿ ನಿಂತು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿದ್ದಾರೆ. ಆದರೆ, ದೇಶದ ಗೃಹ ಸಚಿವ ಅಮಿತ್ ಶಾ (Amit shah) ಮತ್ತು ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಗೆ ಮಾಧ್ಯಮಗಳ ಮುಂದೆ ನಿಂತು ಉತ್ತರಿಸುವ ಧೈರ್ಯವಿಲ್ಲ ಎಂದು ಟೀಕಿಸಿದ್ದಾರೆ.
Young people are standing in front of the Indian Press, but Amit Shah and the Prime Minister do not have the courage to stand here.
: LoP Shri @RahulGandhi pic.twitter.com/hiADzMUUts
— Congress (@INCIndia) August 5, 2026
ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಯುವಜನತೆ ಸತ್ಯವನ್ನು ನುಡಿಯಲು ಮತ್ತು ಪ್ರಶ್ನಿಸಲು ಹಿಂಜರಿಯುತ್ತಿಲ್ಲ. ಆದರೆ, ಆಡಳಿತಾರೂಢ ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಸಂಸತ್ತಿನಲ್ಲಿ ಮತ್ತು ಸಾರ್ವಜನಿಕವಾಗಿ ಪ್ರಮುಖ ವಿಷಯಗಳ ಬಗ್ಗೆ ಪ್ರಶ್ನೆ ಮಾಡಿದಾಗ ಪ್ರಧಾನಿ ಹಾಗೂ ಗೃಹ ಸಚಿವರು ಉತ್ತರಿಸದೆ ಓಡಿಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ : ಮೋದಿ ಕೈಗೊಂಡ ಕ್ರಮಗಳು ವಿದ್ಯಾರ್ಥಿಗಳಿಗೆ ವರದಾನ – ಲೋಕಸಭೆಯಲ್ಲಿ ತೇಜಸ್ವಿ ಸೂರ್ಯ ಅಬ್ಬರ : VIDEO
ಯುವಕರ ಧ್ವನಿಯನ್ನು ಹತೋಟಿಯಲ್ಲಿಡಲು ಸರ್ಕಾರ ಯತ್ನಿಸುತ್ತಿದೆಯಾದರೂ, ಯುವಜನತೆ ಮಾಧ್ಯಮಗಳ ಮುಂದೆ ತಮ್ಮ ಅಸಮಾಧಾನವನ್ನು ನೇರವಾಗಿ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರದ ಪ್ರಮುಖ ನಾಯಕರು ಪತ್ರಿಕಾಗೋಷ್ಠಿಗಳನ್ನು ನಡೆಸಲು ಅಥವಾ ಮುಕ್ತವಾಗಿ ಪ್ರಶ್ನೆಗಳನ್ನು ಎದುರಿಸಲು ಭಯಪಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದರು. ಈ ಕುರಿತು ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಹೇಳಿಕೆಯನ್ನು ಹಂಚಿಕೊಂಡಿದೆ.