ನವದೆಹಲಿ : ‘ನಮಗೆ ವ್ಲಾಡಿಮಿರ್ ಪುಟಿನ್ (Vladimir Putin) ಭೇಟಿಗೆ ಅವಕಾಶ ನೀಡಿಲ್ಲ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಕಿಡಿ ಕಾರಿದ್ದಾರೆ
ಪ್ರಧಾನಿ ಮೋದಿ ಆಹ್ವಾನದ ಮೇರೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಭಾರತಕ್ಕೆ ಭೇಟಿ ನೀಡ್ತಿದ್ದಾರೆ. ಡಿಸೆಂಬರ್ 5ರಂದು ನಡೆಯುವ 23ನೇ ಭಾರತ-ರಷ್ಯಾ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಹಾಗೂ ವ್ಲಾಡಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ವಿದೇಶಿ ನಾಯಕರು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡುವುದು ಬಹಳ ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ, ಆದರೆ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವಾಲಯ ಈ ನಿಯಮವನ್ನು ಪಾಲಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
#WATCH | Lok Sabha LoP and Congress MP Rahul Gandhi says, “…It usually is a tradition that whoever visits from outside has a meeting with LoP. It used to happen during the governments of Vajpayee ji, Manmohan Singh ji. This has been a tradition. But these days, foreign… pic.twitter.com/5PxmGtiDCn
— ANI (@ANI) December 4, 2025
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಎರಡು ದಿನಗಳ ಭಾರತ ಭೇಟಿಗೆ ಕೆಲವೇ ಗಂಟೆಗಳ ಮೊದಲು, ವಿದೇಶಿ ಗಣ್ಯರು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡುವುದನ್ನು ಸರ್ಕಾರ ನಿಷೇಧಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
‘ನಾನು ವಿದೇಶಕ್ಕೆ ಹೋದಾಗ ವಿಪಕ್ಷ ನಾಯಕನನ್ನು ಭೇಟಿ ಮಾಡಬಾರದು ಎಂದು ಹೇಳುತ್ತಾರೆ. ನಾವು ಭಾರತವನ್ನು ಪ್ರತಿನಿಧಿಸುತ್ತೇವೆ. ಆದರೆ ಈ ಸರ್ಕಾರ ನಾವು ವಿದೇಶಿ ಗಣ್ಯರನ್ನು ಭೇಟಿ ಮಾಡಲು ಬಯಸುವುದಿಲ್ಲ. ಅಭದ್ರತೆಯ ಕಾರಣದಿಂದಾಗಿ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವಾಲಯ ಈ ಶಿಷ್ಟಾಚಾರವನ್ನು ಅನುಸರಿಸುತ್ತಿಲ್ಲ’ ಎಂದು ಆರೋಪ ಮಾಡಿದ್ದಾರೆ.
ಕೆಲ ಹೊತ್ತಲ್ಲೇ ಪುಟಿನ್ ಆಗಮನ
ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಅವರು ಇಂದು ಸಂಜೆ ಭಾರತಕ್ಕೆ ಆಗಮಿಸುತ್ತಿದ್ದಾರೆ. ಉಭಯ ರಾಷ್ಟ್ರಗಳ ರಕ್ಷಣಾ ಸಂಬಂಧಗಳನ್ನು ಹೆಚ್ಚಿಸುವುದು, ಭಾರತ-ರಷ್ಯಾ ವ್ಯಾಪಾರವನ್ನು ಬಾಹ್ಯ ಒತ್ತಡದಿಂದ ಪ್ರತ್ಯೇಕಿಸುವುದು ಮತ್ತು ಸಹಕಾರವನ್ನು ಅನ್ವೇಷಿಸುವುದರ ಕುರಿತು ಮೋದಿ ಮತ್ತು ಪುಟಿನ್ ಮಾತುಕತೆ ನಡೆಸಲಿದ್ದಾರೆ.
ಮೋದಿ- ಪುಟಿನ್ ಭೇಟಿ ರಹಸ್ಯ
ತೈಲ ಆಮದು ಬಗ್ಗೆ ಅಮೆರಿಕ ವಿಧಿಸಿರುವ ನಿರ್ಬಂಧಗಳ ಬಗ್ಗೆ ಮೋದಿ- ಪುಟಿನ್ ಚರ್ಚೆ ನಡೆಸಲಿದ್ದಾರೆ.. ಅಷ್ಟೇ ಅಲ್ಲದೆ ಟ್ರಂಪ್ ವಿಧಿಸಿದ ಸುಂಕಾಸ್ತ್ರದ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ದಿಗ್ಗಜ್ಜರು ಸಜ್ಜಾಗಿದ್ದಾರೆ.. ಉಭಯ ರಾಷ್ಟ್ರಗಳ ನಡುವೆ ಶಕ್ತಿ ಸಹಕಾರ ನೀಡುವ ಮೂಲಕ ವಿರೋಧಿಗಳಿಗೆ ಠಕ್ಕರ್ ನೀಡುವುದು.. ರಷ್ಯಾದ ಮಿಲಿಟರಿ ಉಪಕರಣಗಳ ಖರೀದಿಯನ್ನು ಕಡಿಮೆ ಮಾಡಲು ಅಮೆರಿಕದಿಂದ ಒತ್ತಡದ ಹಿನ್ನೆಲೆಯಲ್ಲಿ, ರಷ್ಯಾದೊಂದಿಗೆ ರಕ್ಷಣಾ ಮತ್ತು ಆರ್ಥಿಕ ಸಂಬಂಧ ಗಟ್ಟಿ ಮಾಡಲು ಪ್ಲಾನ್ ಮಾಡಲಾಗಿದೆ.. ಈ ಮೂಲಕ ಅಮೆರಿಕ ವಿಧಿಸಿರುವ ನಿರ್ಬಂಧಕ್ಕೆ ದೊಸ್ತಿಗಳು ಠಕ್ಕರ್ ಕೊಡಲು ಸಜ್ಜಾಗಿದ್ದಾರೆ.. ಇಷ್ಟೇ ಅಲ್ಲದೆ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ನಾಯಕರು ಚರ್ಚೆ ನಡೆಸಲಿದ್ದಾರೆ.. ಪರಮಾಣು ಶಕ್ತಿಗಾಗಿ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ : ಭಾರತ–ರಷ್ಯಾ ನಡುವೆ 2 ಬಿಲಿಯನ್ ಡಾಲರ್ ಮೊತ್ತದ ಅಣುಶಕ್ತಿ ಜಲಾಂತರ್ಗಾಮಿ ಲೀಸ್ ಒಪ್ಪಂದ ಅಂತಿಮ