ನವದೆಹಲಿ: ಇಂದು ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಪತ್ರಕರ್ತನೊಬ್ಬನ ಮೇಲೆ ಸಿಟ್ಟಾದ್ರು. ಮೋದಿ ಉಪನಾಮ ಕೇಸ್‌ನಲ್ಲಿ ಕೋರ್ಟ್ ತೀರ್ಪನ್ನಾಧರಿಸಿ ಸಂಸದ ಸ್ಥಾನ ಕಳೆದುಕೊಂಡಿರುವ ರಾಹುಲ್ ಗಾಂಧಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್ ನ್ಯಾಯಾಲಯದ ತೀರ್ಪು ವಿಚಾರದಲ್ಲಿ ಪ್ರಶ್ನೆಯನ್ನು ಕೇಳಿದ ಪತ್ರಕರ್ತನೋರ್ವನನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡ್ರು
ಮೋದಿ ಉಪನಾಮದ ವಿರುದ್ಧ ರಾಹುಲ್ ಗಾಂಧಿಯವರ ಹೇಳಿಕೆಯು ಇತರೆ ಹಿಂದುಳಿದ ವರ್ಗ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ಹೇಳುತ್ತಿದೆ. ಇದಕ್ಕೆ ಏನಂತೀರಿ ಎಂದು ಪತ್ರಕರ್ತರೊಬ್ಬರು ಪ್ರಶ್ನೆಯನ್ನು ಕೇಳಿದ್ರು. ಇದಕ್ಕೆ ಗರಂ ಆದ ರಾಹುಲ್ ಗಾಂಧಿ ನೀವು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದೀರಿ. ನೀವು ಬಿಜೆಪಿಗಾಗಿ ಕೆಲಸ ಮಾಡಲು ಬಯಸಿದರೆ ನಿಮ್ಮ ಎದೆಯ ಮೇಲೆ ಬಿಜೆಪಿ ಬ್ಯಾಡ್ಜ್ ಹಾಕಿಕೊಳ್ಳಿ. ನಂತರ ನಾನು ಇಲ್ಲಿರುವ ಇತರೆ ಪತ್ರಕರ್ತರಿಗೆ ಉತ್ತರಿಸಿದಂತೆಯೇ ನಿಮಗೂ ಉತ್ತರಿಸುತ್ತೇನೆ. ಪತ್ರಕರ್ತರಂತೆ ನಟಿಸಬೇಡಿ ಎಂದಿದ್ದಾರೆ ರಾಹುಲ್.