Tuesday, November 5, 2024
Homeಟಾಪ್ ನ್ಯೂಸ್ಬೆಳಗಾವಿಗೆ ರಾಹುಲ್ ಗಾಂಧಿ ಆಗಮನ : ಯುವಕ್ರಾಂತಿ ಸಮಾವೇಶಕ್ಕೆ ಕುಂದಾನಗರಿ ಸಜ್ಜು

ಬೆಳಗಾವಿಗೆ ರಾಹುಲ್ ಗಾಂಧಿ ಆಗಮನ : ಯುವಕ್ರಾಂತಿ ಸಮಾವೇಶಕ್ಕೆ ಕುಂದಾನಗರಿ ಸಜ್ಜು

ಯುವಕ್ರಾಂತಿ ಸಮಾವೇಶಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದಾರೆ. ಇಲ್ಲಿನ ವಿಮಾನದಲ್ಲಿ ಬಂದಿಳಿದ ರಾಹುಲ್‌ ಗಾಂಧಿಯವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ವಾಗತಿಸಿದ್ರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ ರಾಹುಲ್ ಗಾಂಧಿಯವರನ್ನು ಬರಮಾಡಿಕೊಂಡ್ರು.

ಯುವಕ್ರಾಂತಿ ಸಮಾವೇಶಕ್ಕೆ ಕುಂದಾ ನಗರಿ ಬೆಳಗಾವಿ ಸಜ್ಜಾಗಿದೆ. ರಾಹುಲ್​​ ಸ್ವಾಗತಕ್ಕೆ ಕುಂದಾನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್​​ಗಳು ರಾರಾಜಿಸುತ್ತಿದ್ದು, ವೇದಿಕೆ ಮುಂಭಾಗದಲ್ಲಿ ಬೃಹತ್ ಕಟೌಟ್​​​ಗಳನ್ನ ಕಟ್ಟಲಾಗಿದೆ. ಇಂದು ಸುಮಾರು 3ಗಂಟೆಗಳ ಕಾಲ ಬೆಳಗಾವಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ರಾಜ್ಯದಲ್ಲಿ ಚುನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ ಪ್ರಮುಖ ಪಕ್ಷಗಳ ಘಟಾನುಘಟಿ ನಾಯಕರು ರಾಜ್ಯಕ್ಕಾಗಮಿಸಿ ಮತಬೇಟೆಯಲ್ಲಿ ತೊಡಗುತ್ತಿದ್ದಾರೆ. ಬಿಜೆಪಿಯ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಆಗಾಗ್ಗೆ ರಾಜ್ಯಕ್ಕಾಗಮಿಸಿ ಮತಬ್ಯಾಂಕ್ ಭದ್ರಗೊಳಿಸಿಕೊಳ್ತಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್‌ ಕೂಡಾ ಪ್ರಜಾಧ್ವನಿ ಯಾತ್ರೆಯ ಮೂಲಕ ಪ್ರಚಾರಕಾರ್ಯ ಮಾಡುತ್ತಿದ್ದು ಇಂದು ರಾಹುಲ್ ಗಾಂಧಿ ರಾಜ್ಯದಲ್ಲಿ ಮತಬೇಟೆಗೆ ಆಗಮಿಸಿದ್ದಾರೆ

ಭಾರತ್ ಜೋಡೋ ಯಾತ್ರೆಯ ನಂತರ ಚುನಾವಣಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ರಾಹುಲ್‌ ಗಾಂಧಿ ಯುವಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಬೆಳಗಾವಿಯ ಪ್ರಮುಖ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಈ ಸಮಾವೇಶದಲ್ಲಿ ನಿರೋದ್ಯೋಗಿ ಯುವಕರಿಗಾಗಿಯೇ ಹೊಸ ಯೋಜನೆಯೊಂದನ್ನು ಕಾಂಗ್ರೆಸ್ ಘೋಷಿಸುವ ನಿರೀಕ್ಷ ಇದೆ.  ರಾಹುಲ್ ಗಾಂಧಿ ಸಮಾವೇಶ ಬಳಿಕ ವಿಶೇಷ ವಿಮಾನದಲ್ಲಿ ಕೇರಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!