Saturday, March 15, 2025
Homeಕ್ರೈಂSHIVA SENA : ಹಾಲು ಖರೀದಿಸುವಾಗ ಶಿವಸೇನಾ ಮುಖಂಡನ​​ ಗುಂಡಿಕ್ಕಿ ಭೀಕರ ಕೊಲೆ!-VIDEO

SHIVA SENA : ಹಾಲು ಖರೀದಿಸುವಾಗ ಶಿವಸೇನಾ ಮುಖಂಡನ​​ ಗುಂಡಿಕ್ಕಿ ಭೀಕರ ಕೊಲೆ!-VIDEO

ಪಂಜಾಬ್ : ಮಾಜಿ ಸಿಎಂ ಏಕನಾಥ್​​​ ಶಿಂಧೆ ಶಿವಸೇನೆ ಬಣದ ಮೋಗಾ ಜಿಲ್ಲಾ ಘಟಕದ ಅಧ್ಯಕ್ಷ ಮಂಗತ್ ರಾಯ್ ಮಾಂಗಾ ಎಂಬುವವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.

ಮೋಗಾ ನಗರದಲ್ಲಿ ಮಂಗತ್ ಅವರು​​​​​​​​ ಹಾಲು ಖರೀದಿಸಲೆಂದ ಬೈಕ್​ ಮೇಲೆ ಆಗಮಿಸಿದ್ದಾಗ ನಿನ್ನೆ ರಾತ್ರಿ 10 ಸುಮಾರಿಗೆ ಹಂತಕರು ಹಿಂಬಾಲಿಸಿ ಬಂದಿದ್ದಾರೆ. ಶೂಟ್​ ಮಾಡುವಾಗ ಗುರಿತಪ್ಪಿ ಸಮೀಪದಲ್ಲಿದ್ದ 11 ವರ್ಷದ ಬಾಲಕನಿಗೆ ಗುಂಡು ತಾಕಿದೆ.


ಕೂಡಲೇ ಮಂಗತ್​ ಅಲ್ಲಿಂದ ಎಸ್ಕೇಪ್ ಆಗುವಾಗ ಮತ್ತೆ ಹಿಂಬಾಲಿಸಿದ ದುಷ್ಕರ್ಮಿಗಳು, ಶೂಟ್​​ ಮಾಡಿ ಪರಾರಿಯಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಮಂಗತ್​​​​ ಅಸುನೀಗಿದ್ದು, ಗಾಯಾಳು ಬಾಲಕನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಹಂತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅತ್ತ ಹತ್ಯೆ ಖಂಡಿಸಿ ಮಂಗಾತ್ ಬೆಂಬಲಿಗರು ತೀವ್ರ ಪ್ರತಿಭಟನೆಯನ್ನು ಜಿಲ್ಲೆಯಾದ್ಯಂತ ಕೈಗೊಂಡಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!