Saturday, January 25, 2025
Homeಬೆಂಗಳೂರುಕರಗ ಆಚರಣೆಗೆ ಎನ್.ಎ ಹ್ಶಾರಿಸ್ ಅವಮಾನ : ಶಾಸಕರ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಕರಗ ಆಚರಣೆಗೆ ಎನ್.ಎ ಹ್ಶಾರಿಸ್ ಅವಮಾನ : ಶಾಸಕರ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಬೆಂಗಳೂರು: ಜೋಗುಪಾಳ್ಯ ಹಲಸೂರು ಠಾಣೆ ಮುಂಭಾಗದಲ್ಲಿ ಹಿಂದೂಗಳ ಧಾರ್ಮಿಕ ಅಚರಣೆಯಾದ ಕರಗ ಮಹೋತ್ಸವ ಕುರಿತು ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್.ಎ.ಹ್ಯಾರೀಸ್ ರವರ ಅವಹೇಳನಕಾರಿ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದ್ರು.

ಶಾಂತಿನಗರ ವಿಧಾನಸಭಾ ಬಿಜೆಪಿ ಮುಖಂಡರು ಮಾಜಿ ಮಹಾಪೌರರಾದ ಎಂ.ಗೌತಮ್ ಕುಮಾರ್ ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಲಕ್ಷ್ಮೀನಾರಾಯಣ್(ಗುಂಡಣ್ಣ) ಹಾಗೂ ನೂರಾರು ಬಿಜೆಪಿ ಪ್ರಮುಖರು ಮುಖಂಡರು, ಕಾರ್ಯಕರ್ತರು, ಪಾದಯಾತ್ರೆ ಮೂಲಕ ಹಲಸೂರು ಪೊಲೀಸ್ ಬಳಿ ಠಾಣೆ ಬಳಿ ಬಂದು ಮೌನ ಪ್ರತಿಭಟನೆ ಮಾಡಿದರು.

ಎಂ.ಗೌತಮ್ ಕುಮಾರ್ ರವರು ಮಾತನಾಡಿ ಶತಮಾನಗಳ ಇತಿಹಾಸ ಹೊಂದಿರುವ ವಿಶ್ವಪ್ರಸಿದ್ದ ಬೆಂಗಳೂರು ಕರಗ ಹಿಂದೂಗಳ ಪಾಲಿಗೆ ಆರಾದ್ಯ ದೈವವಾಗಿದೆ. ಆದರೆ ಶಾಸಕ ಹ್ಯಾರೀಸ್ ಕರಗ ಮಹೋತ್ಸವದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಕಾಮಗಾರಿಗಳ ಸಂದರ್ಭದಲ್ಲಿ ಪೂಜೆ ಮಾಡಬಾರದು ಹೀಗೆ ಹಲವಾರು ಹಿಂದೂ ವಿರೋಧಿ ನಿಲುವು ತಾಳಿದ್ದಾರೆ. ಸತತವಾಗಿ ಹಿಂದೂಗಳ ವಿರುದ್ದ ಹೇಳಿಕೆ ನೀಡುತ್ತಿರುವ ಹ್ಯಾರೀಸ್ ರವರ ನಿಜಬಣ್ಣ ಬಯಲು ಮಾಡಲು ಪ್ರತಿಯೊಬ್ಬ ಹಿಂದುಗಳ ಮನೆಗಳಿಗೆ ವಿಷಯ ತಲುಪಿಸಲಾಗುತ್ತದೆ

ಕರಗದ ದೈವ ಮಹಿಮೆ ಇತಿಹಾಸದ ಕುರಿತು ಅರಿವು ಇಲ್ಲದ ಶಾಸಕ ಎನ್.ಎ.ಹ್ಯಾರೀಸ್ ಅವಹೇಳನಕಾರಿ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಶಾಸಕರ ವಿರುದ್ದ ಕೇಸ್ ದಾಖಲಿಸಿ ಬಂಧಿಸಬೇಕು ಅಗ್ರಹಿಸುತ್ತೇವೆ ಎಂದ್ರು.

ಹೆಚ್ಚಿನ ಸುದ್ದಿ

error: Content is protected !!