Thursday, March 12, 2026
Homeಟಾಪ್ ನ್ಯೂಸ್PRIYANK KHARGE : ಕೆಪಿಸಿಸಿಯಲ್ಲಿ ಕಸ ಗುಡಿಸಿ ಮೇಲೆ ಬಂದಿದ್ದೇನೆ ಎಂದ ಡಿಕೆ - ಕರೆಕ್ಟಾಗಿ...

PRIYANK KHARGE : ಕೆಪಿಸಿಸಿಯಲ್ಲಿ ಕಸ ಗುಡಿಸಿ ಮೇಲೆ ಬಂದಿದ್ದೇನೆ ಎಂದ ಡಿಕೆ – ಕರೆಕ್ಟಾಗಿ ಹೇಳಿದಾರೆ ಎಂದ ಪ್ರಿಯಾಂಕ್‌ ಖರ್ಗೆ.!

ಕೆಪಿಸಿಸಿಯಲ್ಲಿ (KPCC) ಕಸ ಗುಡಿಸಿ, ಪೋಸ್ಟರ್ ಅಂಟಿಸಿ ಈ ಹಂತಕ್ಕೆ ಬಂದಿದ್ದೇನೆ ಬಗ್ಗೆ ಡಿಕೆ ಶಿವಕುಮಾರ್ (Dk Shivakumar) ಹೇಳಿಕೆ ವಿಚಾರದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರತಿಕ್ರಿಯಿಸಿದ್ದು, ಡಿ.ಕೆ ಶಿವಕುಮಾರ್ ಕಾಂಗ್ರೆಸ್ ನ ಹಿರಿಯ ನಾಯಕರು ಅವರು ನಡೆದು ಬಂದ ಹಾದಿಯ ಬಗ್ಗೆ ಮಾತಾಡಿದ್ದಾರೆ ಅಷ್ಟೇ ಎಂದು ಹೇಳಿದರು.

ಈ ಬಗ್ಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಕಾಂಗ್ರೆಸ್ ನಲ್ಲಿ ಅನೇಕ ವರ್ಷಗಳಿಂದ ಇದ್ದಾರೆ, ಹಿರಿಯರು ಕೂಡ ಅವರು ನಡೆದು ಬಂದ ಹಾದಿಯ ಬಗ್ಗೆ ಮಾತನಾಡಿದ್ದಾರೆ. ಆರಂಭದ ದಿನದಿಂದಲೂ ಅವರು ನಡೆದು ಬಂದಿರೋದನ್ನ ಹೇಳಿದ್ದಾರೆ, ಈಗಲೂ ಹೇಳಿದ್ದಾರೆ ಅಷ್ಟೇ..

ಲಕ್ಷಾಂತರ ಜನರು ಪಕ್ಷಕ್ಕಾಗಿ ಕೆಲಸ ಮಾಡಿದರಿಂದಲೇ ಇಂದು ನಮ್ಮ ಪಕ್ಷ ಅಧಿಕಾರಕ್ಕೆ ಬಂದಿರೋದು, ಹಾಗಾಗಿ ಯಾರನ್ನೂ ಕಡೆಗಣಿಸೋದು ಸರಿಯಲ್ಲ. ಯಾರು ಎಷ್ಟು ಕೆಲಸ ಮಾಡಿದ್ದಾರೆ, ಅವರ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿದೆ ಅಲ್ವೇ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ಸಿಗುವುದು ಸ್ವಲ್ಪ ತಡವಾಗಬಹುದು, ಇನ್ನು ಕೆಲವರಿಗೆ ಬೇಗ ಸಿಗಬಹುದು ಆದರೆ ಖಂಡಿತವಾಗಿ ಸಿಕ್ಕೆ ಸಿಗುತ್ತದೆ. ಪಕ್ಷ ಎಲ್ಲರನ್ನೂ ಸಮಾನವಾಗಿ ನೋಡುತ್ತದೆ ಎಂದು ಖರ್ಗೆ ಹೇಳಿದರು.

ಇನ್ನು ಇದೇ ವೇಳೆ ಡಿಕೆಶಿ ರಾಹುಲ್ ಭೇಟಿಗೆ ಸಮಯಾವಕಾಶ ಸಿಗದ ವಿಚಾರದ ಬಗ್ಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ರಾಹುಲ್ ಗಾಂಧಿಯವರು ದೆಹಲಿಯಲ್ಲಿ ಇರಲೇ ಇಲ್ಲ.. ಅಷ್ಟಕ್ಕೂ ಡಿಸಿಎಂ ರಾಹುಲ್ ಗಾಂಧಿಯವರ ಭೇಟಿಗೆ ಸಮಯಾವಕಾಶವನ್ನೇ ಕೇಳಿರಲಿಲ್ಲ..

ದೆಹಲಿಗೆ ಹೋಗಿದಕ್ಕೆಲ್ಲಾ ರಾಹುಲ್ ಗಾಂಧಿಯವರ ಭೇಟಿಗೆ ಹೋಗುತ್ತಾರಾ? ಡಿಕೆ ಶಿವಕುಮಾರ್ ಅವರು ರಾಹುಲ್ ಗಾಂಧಿಯವರ ಭೇಟಿಗೆ ಸಮಯಾವಕಾಶವನ್ನೇ ಕೇಳಿರಲಿಲ್ಲ.. ನಾನೂ ಕೂಡ ದೆಹಲಿಗೆ ಹೋಗುತ್ತೇನೆ, ಅದು ಬೇರೆ ಬೇರೆ ಕೆಲಸಗಳಿಗೆ ಹೋಗುತ್ತೇನೆ. ಆದ್ರೆ ರಾಹುಲ್ ಗಾಂಧಿಗೆ ಮಾತ್ರ ಭೇಟಿಗೆ ಅನ್ನೋದು ಸರಿಯಲ್ಲ ಎಂದು ಖರ್ಗೆ ಕಿಡಿಕಾರಿದರು.

ಡಿಕೆಶಿಗೆ ಸೆಂಡಾಫ್ ಕೊಡಲು ಸಜ್ಜು – ನೆಕ್ಸ್ಟ್ ಡಿಸಿಎಂ ಜಮೀರ್ ಎಂದು ಪೋಸ್ಟರ್!

ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಹೆಚ್ಚಾಗುತ್ತಲೇ ಇದ್ದು, ಸಿಎಂ ಸಿದ್ದರಾಮಯ್ಯ, ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೊಂಚ ಸೈಲೆಂಟ್ ಆಗಿದ್ದಾರೆ. ಆದರೆ ಮುಂದಿನ ಸಿಎಂ ಜಿ ಪರಮೇಶ್ವರ್ ಆಗಬೇಕು ಎಂದು ಒಂದು ಬಣ ಹೇಳಿಕೆ ನೀಡುತ್ತಲೇ ಇದ್ದಾರೆ, ಇತ್ತ ಜಮ್ಮೀರ್ ಅಹಮದ್ ಮುಂದಿನ ಡಿಸಿಎಂ ಎಂಬ ಕೂಗು ಜೋರಾಗಿದೆ.

ಸಿಎಂ ಸಿದ್ದರಾಮಯ್ಯ ಬಳಿಕ ಜಿ ಪರಮೇಶ್ವರ್ ಸಿಎಂ ಪಟ್ಟ ಅಲಂಕರಿಸಬೇಕು ಎಂದು ದಲಿತ ಸಂಘಟನೆಗಳು ಒತ್ತಾಯಿಸುತ್ತಿದೆ. ಇದೀಗ ಜಮೀರ್ ಮುಂದಿನ ಡಿಸಿಎಂ ಎಂದು ಚಾಮರಾಜಪೇಟೆಯಲ್ಲಿ ಬೆಂಬಲಿಗರು ಪೋಸ್ಟರ್, ಬ್ಯಾನರ್ ಅಂಟಿಸಿದ್ದಾರೆ.

ಜೆಜೆ ನಗರ ರಸ್ತೆಯಲ್ಲಿ ಜಮ್ಮೀರ್ ನೆಕ್ಸ್ಟ್ ಡಿಸಿಎಂ ಎಂಬ ಪೋಸ್ಟರ್ ರಾರಾಜಿಸುತ್ತಿದ್ದು, ಹೊಸ ವರ್ಷದ ಶುಭಾಶಯ ತಿಳಿಸುವ ಫೋಸ್ಟರ್ ಗಳಲ್ಲಿ ಜಮ್ಮೀರ್ ಡಿಸಿಎಂ ಎಂದು ಬರೆಯಲಾಗಿದೆ. ಸಿದ್ದರಾಮಯ್ಯ ಬದಲಾಗಿ ಡಿಕೆಶಿ ಸಿಎಂ ಆದರೆ, ಅಲ್ಪಸಂಖ್ಯಾತ ಕೋಟಾದಡಿಯಲ್ಲಿ ಜಮ್ಮೀರ್ ಡಿಸಿಎಂ ಮಾಡ್ತಾರೆಂದು ಶುರುವಾಗಿರುವ ಚರ್ಚೆ ಶುರುವಾಗಿದೆ.

ಒಂದು ವೇಳೆ ಸಂಪುಟ ಪುನಾರಚನೆ ಆದರೂ ಜಮ್ಮೀರ್ ಗೆ ಡಿಸಿಎಂ ಹುದ್ದೆ ನೀಡಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಈ ನಡುವೆ ಜಮ್ಮೀರ್ ಅಹಮದ್ ಡಿಸಿಎಂ ಎಂದು ಪೋಸ್ಟರ್ ಕಂಡು ಬರುತ್ತಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!