Sunday, January 25, 2026
Homeಟಾಪ್ ನ್ಯೂಸ್VLADIMIR PUTIN : ಪುಟಿನ್‌ಗಾಗಿ ಸಿಂಗಾರಗೊಂಡ ಪ್ರಧಾನಿ ನಿವಾಸ : ಭರ್ಜರಿ ಔತಣಕೂಟ ಆಯೋಜಿಸಿದ ಮೋದಿ...

VLADIMIR PUTIN : ಪುಟಿನ್‌ಗಾಗಿ ಸಿಂಗಾರಗೊಂಡ ಪ್ರಧಾನಿ ನಿವಾಸ : ಭರ್ಜರಿ ಔತಣಕೂಟ ಆಯೋಜಿಸಿದ ಮೋದಿ – VIDEO

ನವದೆಹಲಿ : ಭಾರತಕ್ಕೆ ಭೇಟಿ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಸ್ವಾಗತಕ್ಕಾಗಿ ಪ್ರಧಾನಿ ಅಧಿಕೃತ ನಿವಾಸವನ್ನು ಅದ್ಧೂರಿಯಾಗಿ ಅಲಂಕರಿಸಲಾಗಿದೆ. ಜೊತೆಗೆ ಇಂದು ಇಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಗೆಳೆಯ ಪುಟಿನ್​ಗಾಗಿ (Vladimir putin) ವಿಶೇಷ ಭೋಜನಕೂಟವನ್ನು ಆಯೋಜಿಸಿದ್ದಾರೆ.

ಪುಟಿನ್‌ 2 ದಿನಗಳ ಭಾರತ ಪ್ರವಾಸದಲ್ಲಿ ಇದ್ದಾರೆ. ಇಂದು ಖುದ್ದಾಗಿ ದೆಹಲಿಯ ವಿಮಾನ ನಿಲ್ದಾಣಕ್ಕೆ ತೆರಳಿ ಪುಟಿನ್ ಅವರನ್ನು ಪ್ರಧಾನಿ ಮೋದಿ ಬರಮಾಡಿಕೊಂಡಿದ್ದಾರೆ. ಇದಾದ ಬಳಿಕ ಇಬ್ಬರೂ ಒಂದೇ ಕಾರಿನಲ್ಲಿ ಪ್ರಧಾನ ಮಂತ್ರಿಗಳ ಸರ್ಕಾರಿ ನಿವಾಸಕ್ಕೆ ತೆರಳಿದ್ದಾರೆ. ಈ ವೇಳೆ ಸೆಲ್ಫಿಯನ್ನೂ ತೆಗೆದುಕೊಂಡ್ರು.

ಪ್ರಧಾನಿ ಅಧಿಕೃತ ನಿವಾಸವು ರಷ್ಯಾ ಹಾಗೂ ಭಾರತದ ಧ್ವಜದಿಂದ ಕಂಗೊಳಿಸುತ್ತಿತ್ತು. ಪ್ರಧಾನಿ ನರೇಂದ್ರ ಮೋದಿಯವರು ವ್ಲಾಡಿಮಿರ್ ಪುಟಿನ್ ರನ್ನು ತಮ್ಮ ಅಧಿಕೃತ ನಿವಾಸಕ್ಕೆ ವಿಶೇಷ ಔತಣ ಕೂಟಕ್ಕಾಗಿ ಕರೆದೊಯ್ದರು. ಅತ್ತ 7 ಲೋಕ ಕಲ್ಯಾಣ್ ಮಾರ್ಗವು ಭಾರತ-ರಷ್ಯಾ ಧ್ವಜಗಳು ಮತ್ತು ಬೆಳಕಿನಿಂದ ಅಲಂಕೃತಗೊಂಡಿದೆ.

ಪುಟಿನ್​ಗಾಗಿ ಮೋದಿ ಖಾಸಗಿ ಔತಣಕೂಟ
ಕಳೆದ ವರ್ಷದ ಜುಲೈನಲ್ಲಿ ಪ್ರಧಾನಿ ಮೋದಿ ಮಾಸ್ಕೋಗೆ ಭೇಟಿ ನೀಡಿದ್ದಾಗ ಪುಟಿನ್ ನೀಡಿದ್ದ ಆತಿಥ್ಯಕ್ಕೆ ಪ್ರತಿಯಾಗಿ, ಇಂದು ಪ್ರಧಾನಿ ಮೋದಿ ಪುಟಿನ್‌ಗಾಗಿ ವಿಶೇಷ ಖಾಸಗಿ ಔತಣಕೂಟ ಏರ್ಪಡಿಸಿದ್ದಾರೆ. ನಾಳೆ ನಡೆಯಲಿರುವ 23ನೇ ಭಾರತ-ರಷ್ಯಾ ಶೃಂಗಸಭೆಯ ಮಾತುಕತೆಗೆ ಈ ಔತಣಕೂಟ ವೇದಿಕೆ ಒದಗಿಸಲಿದೆ. ಸುಮಾರು 27 ಗಂಟೆಗಳ ಈ ಭೇಟಿಯ ವೇಳೆ ವ್ಲಾಡಿಮೀರ್ ಪುಟಿನ್ ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿಯಾಗಲಿದ್ದಾರೆ. ಪುಟಿನ್ ಭೇಟಿಯು ಭಾರತ ಮತ್ತು ರಷ್ಯಾ ನಡುವಿನ ಸುಮಾರು ಎಂಟು ದಶಕಗಳ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

ಎರಡು ದಿನಗಳ ಭೇಟಿಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Putin in India) ದೆಹಲಿಗೆ ಆಗಮಿಸಿದ್ದಾರೆ. 4 ವರ್ಷಗಳ ಬಳಿಕ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ, ಅಮೆರಿಕದ ಜೊತೆಗಿನ ಭಾರತದ ಸಂಬಂಧ ಹಳಸಿರುವ ಹಿನ್ನೆಲೆಯಲ್ಲಿ ಈ ಭೇಟಿ ಜಾಗತಿಕವಾಗಿಯೂ ಬಹಳ ಮಹತ್ವ ಪಡೆದಿದೆ.

ವೆಲ್​ ಕಮ್ ವ್ಲಾಡಿಮೀರ್ ಪುಟಿನ್
ಪ್ರಧಾನಿ ಮೋದಿ ಕ್ಷೇತ್ರ ವಾರಾಣಸಿಯಲ್ಲಿ ವ್ಲಾಡಿಮೀರ್ ಪುಟಿನ್ ಪರ ಭರ್ಜರಿ ಸಿದ್ಧತೆ ಮಾಡಲಾಗಿದೆ. ವಿಶಾಲ ಭಾರತ ಸಂಸ್ಥಾನ ಆಯೋಜಿಸಿದ್ದ ಮೆರವಣಿಗೆ ಸುಭಾಷ್ ಭವನದಿಂದ ಮುನ್ಶಿ ಪ್ರೇಮ್‌ಚಂದ್ ಸ್ಮೃತಿ ಗೇಟ್‌ನ ತನಕ ಸಾಗಿತು.

ಅಭಿಮಾನಿಗಳು ಮೋದಿ ಮತ್ತು ಪುಟಿನ್ ಪೋಸ್ಟರ್‌ಗಳನ್ನು ಹಿಡಿದು ‘ಭಾರತ-ರಷ್ಯಾ ಸಂಬಂಧ್ ಜಿಂದಾಬಾದ್, ಭಾರತ-ರಷ್ಯಾ ಕಿ ದೋಸ್ತಿ ಮತ್ತು ವಿಶ್ವಕ್ಕೆ ಭಾರತ-ರಷ್ಯಾ ಸ್ನೇಹ ಬೇಕು’ ಎಂದು ಘೋಷಣೆಗಳನ್ನು ಕೂಗಿದರು. ಮೋದಿ ಬೆಂಬಲಿಗರು ಪುಟಿನ್ ಛಾಯಾಚಿತ್ರಕ್ಕೆ ಆರತಿ ಬೆಳಗಿದರು. ಡ್ರಮ್‌ಗಳನ್ನು ಬಾರಿಸಿದರು.

ಮೋದಿ ಟ್ವೀಟ್‌
ಪುಟಿನ್‌ ಆಗಮನಕ್ಕೆ ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದು, ನನ್ನ ಸ್ನೇಹಿತ, ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷವಾಗುತ್ತಿದೆ. ಇಂದು ಸಂಜೆ ಮತ್ತು ನಾಳೆ ನಡೆಯುವ ನಮ್ಮ ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆ. ಭಾರತ-ರಷ್ಯಾ ಸ್ನೇಹವು ಶಾಶ್ವತವಾದುದು, ಇದು ನಮ್ಮ ಜನರಿಗೆ ಹೆಚ್ಚಿನ ಲಾಭ ತಂದುಕೊಡಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: NARENDRA MODI : ಆತ್ಮೀಯ ಸ್ನೇಹಿತನಿಗೆ ಸ್ವಾಗತ : ಪುಟಿನ್‌ ಭೇಟಿ ಕುರಿತು ಮೋದಿ ಟ್ವೀಟ್ 

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!