ಕಾಡುಗೋಡಿ ಮತ್ತು ವೈಟ್‍ಫೀಲ್ಡ್ ನಡುವಿನ ಮೆಟ್ರೋ ಮಾರ್ಗವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಪ್ರಯಾಣಕ್ಕಾಗಿ ಅವರು ಟೋಕನ್ ಬದಲಾಗಿ ಎನ್‍ಸಿಎಂಸಿ ಬಳಸಿರುವುದಾಗಿ ನಮ್ಮ ಮೆಟ್ರೋ ಮಾಹಿತಿ ನೀಡಿದೆ. ಏನಿದು ಎನ್‍ಸಿಎಂಸಿ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿರಲಿಕ್ಕೂ ಸಾಕು.
ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಎಂಬುದರ ಹೃಸ್ವರೂಪವೇ ಎನ್‍ಸಿಎಂಸಿ. ಇಡೀ ರಾಷ್ಟ್ರಾದ್ಯಂತ ಎನ್‍ಸಿಎಂ ಕಾರ್ಡ್ ಬಳಸಿ ಯಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಬಹುದು ಮತ್ತು ಎಟಿಎಂನಲ್ಲಿ ಬಳಸಬಹುದು. ಗೃಹ ಮತ್ತು ನಗರಾಭಿವೃದ್ಧಿ ಸಚಿವಾಲಯವು 2019 ರಲ್ಲಿ ಇದನ್ನು ಜಾರಿಗೊಳಿಸಿತ್ತು. ನಮ್ಮ ಮೆಟ್ರೋದಲ್ಲಿ ಎನ್‍ಸಿಎಂ ಕಾರ್ಡ್ ಬಳಸಿ ಪ್ರಯಾಣಿಸಿದ ಮೊದಲ ಪ್ರಯಾಣಿಕ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದಾರೆ.
ಇಂದು ಉದ್ಘಾಟನೆಗೊಂಡಿರುವ ಮೆಟ್ರೋ ಮಾರ್ಗ 13.71 ಕಿಮೀ ವ್ಯಾಪ್ತಿ ಹೊಂದಿದ್ದು 12 ನಿಲ್ಧಾಣಗಳನ್ನು ಹೊಂದಿದೆ. ಕೃಷ್ಣರಾಜಪುರ, ಸಿಂಗಯ್ಯನಪಾಳ್ಯ, ಗರುಡಾಚಾರ್ ಪಾಳ್ಯ, ಹೂಡಿ, ಸೀತಾರಾಮ ಪಾಳ್ಯ, ಕುಂದಲಹಳ್ಳಿ, ನಲ್ಲೂರುಹಳ್ಳಿ, ಶ್ರೀ ಸತ್ಯಸಾಯಿ ಆಸ್ಪತ್ರೆ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ ಟ್ರೀ ಪಾರ್ಕ್, ಹೋಪ್ ಫಾರ್ಮ್ ಮತ್ತು ವೈಟ್‍ಫೀಲ್ಡ್ (ಕಾಡುಗೋಡಿಯಲ್ಲಿ) ನಿಲುಗಡೆತಾಣಗಳನ್ನು ನಿರ್ಮಿಸಲಾಗಿದೆ.
ಎನ್‍ಸಿಎಂ ಕಾರ್ಡ್ ಮಾ.30 ರಿಂದ ಪ್ರಯಾಣಿಕರ ಬಳಕೆಗೆ ಲಭ್ಯವಾಗಲಿದೆ .