ಬೆಂಗಳೂರಿನ ಕೆಆರ್ ಪುರ -ಬಯ್ಯಪ್ಪನಹಳ್ಳಿ ನಡುವೆ ನಿರ್ಮಿಸಲಾಗಿರುವ ನೂತನ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಟೋಕನ್ ಪಡೆದು ಮೆಟ್ರೋ ನಲ್ಲೇ ಐದು ಕಿಮೀ ದೂರದವರೆಗೆ ಪ್ರಯಾಣ ಕೂಡ ಮಾಡಿದ ಪ್ರಧಾನಿ ಮೋದಿ, ಪ್ರಯಾಣದ ವೇಳೆ ಸಹಪ್ರಯಾಣಿಕರು ಹಾಗೂ ಶಾಲಾಬಾಲಕರೊಡನೆ ಸಂಭಾಷಣೆ ನಡೆಸಿದರು.
ನೇರಳ ಮಾರ್ಗ ಎಂದು ಕರೆಯಲ್ಪಡುವ ಈ ಮಾರ್ಗ ಬೆಂಗಳೂರಿನ ಪ್ರಮುಖ ಐಟಿ ಟೆಕ್ ಪಾಕ್‍ಗಳಿರುವ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿದೆ. ಸುಮಾರು ಹತ್ತು ಲಕ್ಷ ಮಂದಿಗೆ ಈ ಮಾರ್ಗದಿಂದ ಅನುಕೂಲವಾಗಲಿದ್ದು, ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ.