ಸರ್.ಎಂ. ವಿಶ್ವೇಶ್ವರಯ್ಯ ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಶ್ರೀ ಮಧುಸೂಧನ ಸಾಯಿ ಆರೋಗ್ಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಪ್ರಧಾನಿ, ಈಗ ಉದ್ಘಾಟನೆಗೊಂಡಿರುವ ಬೃಹತ್ ಸಂಸ್ಥೆಯು ಮಾನವೀಯತೆ, ಸೇವಮನೋಭಾವವನ್ನು ವಿಸ್ತರಿಸುವ ನಮ್ಮ ಉದ್ದೇಶವನ್ನು ಮತ್ತಷ್ಟು ಸಧೃಢಗೊಳಿಸಲಿದೆ ಎಂದಿದ್ದಾರೆ. ಇಂಥದ್ದೊಂದು ಅಭಿವೃದ್ಧಿ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾತ್ರವೂ ಇದೆ ಎಂದ ಪ್ರಧಾನಿ ಮೋದಿ, ಬಿಜೆಪಿ ಆಡಳಿತಾರೂಢ ಸರ್ಕಾರವು ಪ್ರತಿಯೊಬ್ಬರಿಗೂ ವೈದ್ಯಕೀಯ ಸೇವೆಯನ್ನು ಸುಲಭಸಾಧ್ಯವಾಗಿ ಸಿಗುವಂತೆ ಮಾಡಿದೆ. ಇಡೀ ಭಾರತದಲ್ಲಿರುವ 10 ಸಾವಿರ ಔಷಧಿ ಕೇಂದ್ರಗಳ ಪೈಕಿ ಒಂದು ಸಾವಿರ ಕೇಂದ್ರಗಳು ಕರ್ನಾಟಕದಲ್ಲೇ ಇವೆ ಎಂದರು.
ಇದೇ ವೇಳೆ ಪ್ರಧಾನಿ ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ ಅವರನ್ನು ಸ್ಮರಿಸಿಕೊಂಡರು. ಪ್ರಧಾನಿ ಮೋದಿ ಇಲ್ಲಿಂದ ರಸ್ತೆಯ ಮೂಲಕ ಬೆಂಗಳೂರಿಗೆ ಸಾಗಿ ನಮ್ಮ ಮೆಟ್ರೋ ನೂತನ ಮಾರ್ಗವನ್ನು ಉದ್ಘಾಟಿಸಲಿದ್ದಾರೆ.