ನವದೆಹಲಿ: ಸಂಸತ್‌ನಲ್ಲಿ ಮಂಡಿಸಲಾದ ಒಂದು ರಾಷ್ಟç ಒಂದು ಚುನಾವಣೆ ಮಸೂದೆಯು ಆಡಳಿತದಲ್ಲಿ ಸ್ಥಿರತೆಯನ್ನು ಉತ್ತೇಜಿಸುತ್ತದೆ. ಹಾಗೆಯೇ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದರ ಜೊತೆಗೆ ಹಲವು ರೀತಿಯಲ್ಲಿ ಉಪಯೋಗವಾಗುವಂತಹ ಮಸೂದೆ ಆಗಿದೆ ಎಂದು ರಾಷ್ಟçಪತಿ ದ್ರೌಪದಿ ಮುರ್ಮು ಅಭಿಪ್ರಾಯಿಸಿದ್ದಾರೆ.
೭೬ನೇ ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರದ ಪ್ರಾರಂಭದ ಕಾಲಘಟ್ಟದಲ್ಲಿ ಹಾಗೂ ನಂತರದಲ್ಲಿ ದೇಶದ ಹೆಚ್ಚಿನ ಭಾಗಗಳು ತೀವ್ರ ಬಡತನ ಮತ್ತು ಹಸಿವನ್ನು ಎದುರಿಸಿದ್ದವು. ಆದರೆ, ಅಚಲವಾದ ನಂಬಿಕೆ, ದೃಢವಾದ ಹೆಜ್ಜೆಗಳಿಂದ ಪ್ರತಿಯೊಬ್ಬರು ಸರ್ವತೋಮುಖ ಅಭಿವೃದ್ದಿ ಕಾಣುವ ದೃಷ್ಟಿಯಿಂದ ಹಲವಾರು ಕ್ರಾಂತಿಕಾರಕ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದರು.
LIVE: President Droupadi Murmu's Address to the Nation on the eve of the 76th Republic Day https://t.co/kFBgdbIW5a
— President of India (@rashtrapatibhvn) January 25, 2025
ರೈತರ ಶ್ರಮದಿಂದ ಆಹಾರ ಉತ್ಪಾದನೆಯಲ್ಲಿ ದೇಶವು ಸ್ವಾವಲಂಬಿಯಾಗಿದೆ. ಹಾಗೆಯೇ ಕಾರ್ಮಿಕರು ದೇಶದ ಮೂಲಭೂ ಸೌಲಭ್ಯ ಹಾಗೂ ಉತ್ಪಾದನಾ ವಲಯದಲ್ಲಿ ಪ್ರಗತಿಯನ್ನು ಸಾಧಿಸಲುವಲ್ಲಿ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಗಳು. ರಾಷ್ಟ್ರೀಯ ಫೆಲೋಶಿಪ್‌ಗಳು, ವಿದೇಶಿ ವಿದ್ಯಾರ್ಥಿ ವೇತನಗಳು. ಹಾಸ್ಟೆಲ್‌ಗಳು ಮತ್ತು ತರಬೇತಿ ಸೌಲಭ್ಯಗಳನ್ನು ಎಸ್ಸಿ ಸಮುದಾಯಗಳ ಯುವಕರಿಗೆ ಒದಗಿಸಲಾಗುತ್ತಿದೆ ಎಂದರು
ಪ್ರಧಾನ ಮಂತ್ರಿ ಅನುಸೂಚಿತ್ ಜಾತಿ ಅಭ್ಯುದಯ ಯೋಜನೆಯು ಉದ್ಯೋಗ ಮತ್ತು ಆದಾಯ ಗಳಿಕೆಯ ಅವಕಾಶಗಳನ್ನು ಒದಗಿಸುವ ಮೂಲಕ ಎಸ್ಸಿ ಸಮುದಾಯಗಳಲ್ಲಿ ಬಡತನವನ್ನು ಕಡಿಮೆ ಮಾಡುವಲ್ಲಿ ಪ್ರಗತಿ ಸಾಧಿಸುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಭಾರತೀಯ ದಂಡ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ ಅಧಿನಿಯಮಗಳೊಂದಿಗೆ ಬದಲಾಯಿಸುವ, ಹೊಸ ಕ್ರಿಮಿನಲ್ ಕಾನೂನುಗಳು ಶಿಕ್ಷೆಯ ಬದಲು ನ್ಯಾಯವನ್ನು ಎತ್ತಿಹಿಡಿಯಲಿವೆ. ಹಾಗೂ ಮಕ್ಕಳ, ಮಹಿಳೆಯರ ಮೇಲೆ ಅಪರಾಧಗಳನ್ನು ತಡೆಯುವಲ್ಲಿ ಹೆಚ್ಚಿನ ಆದ್ಯತೆಯನ್ನು ತೋರಲಾಗಿದೆ ಎಂದು ಅವರು ಹೇಳಿದರು.