Saturday, January 25, 2025
Homeಟಾಪ್ ನ್ಯೂಸ್ಸುಧಾ ಮೂರ್ತಿ, ಸಾಹಿತಿ ಎಸ್ ಎಲ್ ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ

ಸುಧಾ ಮೂರ್ತಿ, ಸಾಹಿತಿ ಎಸ್ ಎಲ್ ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ

ನವದೆಹಲಿ: ಇನ್ಫೋಸಿಸ್ ಸಹ ಸಂಸ್ಥಾಪಕಿ ಮತ್ತು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ , ಕರ್ನಾಟಕದ ಸುಧಾ ಮೂರ್ತಿ ಹಾಗೂ ಹಿರಿಯ ಸಾಹಿತ್ಯ ಎಸ್ ಎಲ್ ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.

ರಾಷ್ಟ್ರಪತಿ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ ಕ್ಷೇತ್ರದ ಸಾಧಕರಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ಪ್ರದಾನಿಸಿದರು.

ಉಮ್ಮತ್ತಾಟ್‌ ನೃತ್ಯ ಕಲಾವಿದೆ ಕೊಡಗಿನ ರಾಣಿ ಮಾಚಯ್ಯ, ಸಿರಿ ಧಾನ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಡಾ. ಖಾದರ್‌, ಬೀದರ್‌ನ ರಶೀದ್‌ ಅಹಮದ್‌ ಖಾದ್ರಿ ಸೇರಿ 54 ಜನರು ಪದ್ಮಪ್ರಶಸ್ತಿಗಳನ್ನು ಸ್ವೀಕರಿಸಿದರು.

ಪ್ರಶಸ್ತಿ ವಿಜೇತರಲ್ಲಿ ಕರ್ನಾಟಕದ ಎಂಟು ಮಂದಿ ಇರುವುದು ಈ ಬಾರಿಯ ವಿಶೇಷ.

ಹೆಚ್ಚಿನ ಸುದ್ದಿ

error: Content is protected !!