ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ಗಿಫ್ಟ್ ಪಾಲಿಟಿಕ್ಸ್ ಜೋರಾಗಿದೆ. ವೋಟ್ ಪಡೆಯಲು ನಾನಾ ಕಸರತ್ತು ಮಾಡುವ ರಾಜಕಾರಣಿಗಳು ಕಳಪೆ ವಸ್ತುಗಳನ್ನು ಜನರಿಗೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿದೆ.
ಹಾಸನದಲ್ಲಿ ಶಾಸಕ ಪ್ರೀತಂ ಗೌಡರ ಬೆಂಬಲಿಗರಿಂದ ಮಹಿಳೆಯರಿಗೆ ಬೆಳ್ಳಿ ಫೋಟೋ ಎಂದು ನೀಡಿದ್ದ ಉಡುಗೊರೆಯ ಅಸಲಿಯತ್ತು ಬಯಲಾಗಿದೆ. ಇದು ಬೆಳ್ಳಿಯಲ್ಲ ಕಳಪೆ ಗುಣಮಟ್ಟದ ಪೇಪರ್ ಪೋಟೋ ಎಂದು ವಿಡಿಯೋ ವೈರಲ್ ಆಗುತ್ತಿದೆ.
ಕಳೆದ ಎರಡು ವಾರಗಳಿಂದ ಹಾಸನ ಕ್ಷೇತ್ರದಲ್ಲಿ ಅಷ್ಟಲಕ್ಷ್ಮಿ ಪೂಜೆ ಹೆಸರಿನಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಶಾಸಕ ಪ್ರೀತಂಗೌಡ ಬೆಂಬಲಿಗರು ವಾರ್ಡ್ ವಾರು ಹಾಗು ಗ್ರಾಮ ಪಂಚಾಯತ್ ಮಟ್ಟದಲ್ಲಿ ಹಲವಾರು ಕಾರ್ಯಕ್ರಮ ನಡೆಸಿದ್ದು, . ಅಲ್ಲಿ ಮತದಾರರಿಗೆ ಆಮಿಷ ಒಡ್ಡಲಾಗಿದೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದರು.
ಸದ್ಯ, ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಮಹಿಳೆಯರಿಗೆ ಕೊಟ್ಡ ಉಡುಗೊರೆ ಪೋಟೋ ಫ್ರೇಮ್ ಅನ್ನು ಕಿತ್ತು ಬೆಳ್ಳಿ ಫೊಟೋ ಕಳಪೆ ಎಂದು ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ. ಇಂತಹ ಗಿಫ್ಟ್ ಕೊಡಬೇಕಿತ್ತೇ, ಬಂದು ಮತ ಹಾಕಿ ಎಂದಿದ್ದರೆ ವೋಟ್ ಹಾಕುತ್ತಿರಲಿಲ್ಲವೇ ಎಂದು ಮಹಿಳೆಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.