Friday, March 21, 2025
Homeಟಾಪ್ ನ್ಯೂಸ್ಇದೇ 27ಕ್ಕೆ ದಿ.ಪ್ರವೀಣ್ ನೆಟ್ಟಾರು ಮನೆ ಗೃಹಪ್ರವೇಶ

ಇದೇ 27ಕ್ಕೆ ದಿ.ಪ್ರವೀಣ್ ನೆಟ್ಟಾರು ಮನೆ ಗೃಹಪ್ರವೇಶ

ಸುಳ್ಯ: ಹತ್ಯೆಯಾಗಿರುವ ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರ ಕುಟುಂಬದವರಿಗೆ ಬಿಜೆಪಿಯಿಂದ ನಿರ್ಮಿಸುತ್ತಿರುವ ಮನೆಯ ಗೃಹ ಪ್ರವೇಶ ಇದೇ 27ರಂದು ನಡೆಯಲಿದೆ.

ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮದ ನೆಟ್ಟಾರು ಎಂಬಲ್ಲಿ 2,700 ಚದರ ಅಡಿ ವಿಸ್ತೀರ್ಣದಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ. ಈ ಮನೆಗೆ ‘ಪ್ರವೀಣ್’ ಎಂದು ನಾಮಕರಣ ಮಾಡಲಾಗಿದೆ. 27ರಂದು ಬೆಳಿಗ್ಗೆ 8.40ಕ್ಕೆ ಶ್ರೀಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಗೃಹ ಪ್ರವೇಶ ನಡೆಯಲಿದೆ. ಅದೇ ದಿನ ರಾತ್ರಿ 7 ಗಂಟೆಗೆ ಕಲ್ಲುರ್ಟಿ ದೈವದ ನರ್ತನ ಸೇವೆ ಸಹ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹೆಚ್ಚಿನ ಸುದ್ದಿ

error: Content is protected !!