ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಜಾತಿ ಸೂಚಕ ಹಿಯಾಳಿಕೆ ಮಾಡಿದ್ದಾರೆ ಎಂಬ ಆರೋಪ ಸಂಸದ ಪ್ರತಾಪ ಸಿಂಹ ವಿರುದ್ಧ ಕೇಳಿ ಬಂದಿದೆ. ಕುರಿ ಚರ್ಬಿ ತಿಂದು ಕೊಬ್ಬಿನ ಮಾತು ಆಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಪ್ರತಾಪ ಸಿಂಹ ಹರಿಹಾಯ್ದಿದ್ದರು.
ಇದು ಕುರುಬರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಾಪ ಸಿಂಹ ಸಿದ್ದರಾಮಯ್ಯ ಅವರನ್ನು ಜಾತಿ ಸೂಚಕವಾಗಿಯೇ ಹೀಯಾಳಿಸಿರುವುದು ಖಂಡನೀಯ. ಇದರ ಪರಿಣಾಮವನ್ನು ಎದುರಿಸಲಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಆಕ್ರೋಶ ಹೊರಹಾಕಿದ್ದಾರೆ.
ಪ್ರಧಾನಿ ಮOದಿಯನ್ನು ಟೀಕಿಸಿದ್ದ ಸಿದ್ದರಾಮಯ್ಯ ಕುರಿತು ಮೈಸೂರಿನಲ್ಲಿ ಮಾತನಾಡಿದ್ದ ಪ್ರತಾಪ್ ಸಿಂಹ, “ಸಿದ್ದರಾಮಯ್ಯ 5 ವರ್ಷಗಳ ಕಾಲ ಸಿಎಂ ಆಗಿದ್ದವರು. ಘನತೆಯಿಂದ ಮಾತನಾಡುವುದನ್ನು ಕಲಿಯಬೇಕು.ಕುರಿ ಚರ್ಬಿ ತಿಂದು ತಿಂದು ಸಿದ್ದರಾಮಯ್ಯನವರಿಗೆ ಕೊಬ್ಬು ಜಾಸ್ತಿಯಾಗಿದೆ. ಪ್ರಧಾನಿ ಮೋದಿಯವರ ವಿರುದ್ಧ ಟೀಕಿಸುತ್ತಲೇ ಇದ್ದಾರೆ” ಎಂದು ಹರಿಹಾಯ್ದಿದ್ದರು.