ಬಿಜೆಪಿಯಿಂದ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಬಾಬುರಾವ್ ಚಿಂಚನಸೂರ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡ್ರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಿಂಚನಸೂರ್‌ರವರನ್ನು ಪಕ್ಷಕ್ಕೆ ಬರಮಾಡಿಕೊಂಡ್ರು.
ಈ ವೇಳೆ ಮಾತನಾಡಿದ ಸಿಂಚನಸೂರ್, ಡಿ.ಕೆ.ಶಿವಕುಮಾರ್ ಋಣವನ್ನು ನಾನು ಏಳೇಳು ಜನ್ಮಕ್ಕೂ ತೀರಿಸಲಾಗುವುದಿಲ್ಲ. ನನ್ನ ಸ್ವ-ಇಚ್ಛೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬಂದಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಚಿಂಚನಸೂರ್ ಶಕ್ತಿ ಏನು ಅನ್ನೋದು ತಿಳಿಯುತ್ತೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿ ಹೇಳ ಹೆಸರಿಲ್ಲದಂತೆ ಹೋಗುತ್ತೆ ಎಂದ್ರು.. ಇನ್ನು ನನ್ನದು ಖರ್ಗೆಯವರದ್ದು ತಂದೆ ಮಗನ ಜಗಳ.. ಅದೆಲ್ಲಾ ಮರೆತು ನಾನು ಪಕ್ಷ ಸೇರ್ಪಡೆಯಾಗುತ್ತಿದ್ದೇನೆ ಎಂದ್ರು.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿ ಅಭಿವೃದ್ಧಿ ಕೆಲಸವನ್ನು ಕಾಂಗ್ರೆಸ್ ಮಾತ್ರ ಮಾಡಲು ಸಾಧ್ಯ ಎಂದು ನಂಬಿ ಈಗಾಗಲೇ ಪುಟ್ಟಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಇದೀಗ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಸೇರುತ್ತಿದ್ದಾರೆ.
ಬಾಬುರಾವ್ ಚಿಂಚನಸೂರ್ ರವರನ್ನು ಗಂಗಾಪುತ್ರ ಎಂದು ಕರೆದ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಕೋಲಿ ಸಮಾಜದ ಅಬ್ಯುದಯಕ್ಕೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದ್ರು.