ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿದ್ಯಾರ್ಹತೆಯನ್ನು ಪ್ರಶ್ನಿಸುವ ಪೋಸ್ಟರ್ ಗಳು ರಾಜಧಾನಿ ದಿಲ್ಲಿಯ ಎಲ್ಲೆಡೆ ಅಂಟಿಸಲಾಗಿದೆ. ‘ಭಾರತದ ಪ್ರಧಾನಮಂತ್ರಿ ವಿದ್ಯಾವಂತರಾಗಿರಬೇಕೆ, ಬೇಡವೇ?’ ಎನ್ನುವ ಪ್ರಶ್ನೆಗಳುಳ್ಳ ಪೋಸ್ಟರ್ ಗಳನ್ನು ದಿಲ್ಲಿಯ ಗೋಡೆಗಳು, ರಸ್ತೆ ಬದಿ ಪಿಲ್ಲರ್ ಗಳಲ್ಲಿ ಅಂಟಿಸಲಾಗಿದೆ.
ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷ ‘ಮೋದಿ ಹಠಾವೋ, ದೇಶ್ ಬಚಾವೋ’ ಎಂಬ ಪೋಸ್ಟರನ್ನು 11 ಭಾಷೆಗಳಲ್ಲಿ ಬಿಡುಗಡೆ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ.
ಹಿಂದಿ, ಉರ್ದು, ಇಂಗ್ಲಿಷ್, ಪಂಜಾಬಿ, ಗುಜರಾತಿ ತೆಲುಗು, ಬಂಗಾಳಿ, ಒರಿಯಾ, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿತ್ತು.