ಬೆಂಗಳೂರು: ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ಕನ್ನಡ ಬರವಣಿಗೆ ಅಭ್ಯಾಸ ಪ್ರಾರಂಭಿಸಿದ್ದಾರೆ. ಸ್ಯಾಂಡಲ್‌ವುಡ್ ನಟಿ ಪೂಜಾ ಗಾಂಧಿ ಕನ್ನಡ ಬರೆಯಲು ಅಭ್ಯಾಸ ಮಾಡುತ್ತಿದ್ದು ಮುದ್ದಾದ ಕೈಬರಹದಲ್ಲಿ ಪತ್ರ ಬರೆದಿದ್ದಾರೆ
ಮೂಲತಃ ಉತ್ತರಪ್ರದೇಶದವರಾದ ಪೂಜಾ ಗಾಂಧಿ ಹುಟ್ಟಿದ್ದು ಮೀರಟ್‌ನಲ್ಲಿ. ಪಂಜಾಬಿ ಕುಟುಂಬದವರಾದ ಇವರ ಬಾಲ್ಯ ಹಾಗೂ ವಿದ್ಯಾಭ್ಯಾಸ ನಡೆದಿದ್ದು ದೆಹಲಿಯಲ್ಲಿ. ಸಿನಿಮಾಗಳಲ್ಲಿ ನಟಿಸಲು ಕರ್ನಾಟಕಕ್ಕೆ ಬಂದ ಪೂಜಾ ಗಾಂಧಿ ಕಷ್ಟಪಟ್ಟಾದರೂ ಕನ್ನದಲ್ಲೇ ಮಾತಾಡುತ್ತಿದ್ರು. ಇದೀಗ ಕನ್ನಡ ಕಲಿಯುವ ಗಂಭೀರ ಚಿಂತನೆ ನಡೆಸಿರುವ ಪೂಜಾ ತಮ್ಮ ಕೈ ಬರಹದಲ್ಲೇ ಪತ್ರ ಬರೆದು ಫೇಸ್ ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ
ಝೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಆಗಮಿಸಿದ ಮೋಹಕ ತಾರೆ ರಮ್ಯಾ ಹಾಗೂ ಕಾರ್ಯಕ್ರಮದ ನಿರೂಪಕ ರಮೇಶ್ ಅರವಿಂದ್ ರವರಿಗೆ ಶುಭಕೋರಿದ ಪತ್ರ ಮತ್ತು ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್‌ರವರು ಪುಸ್ತಕಗಳನ್ನು ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿ ಒಂದು ಪತ್ರವನ್ನು ದುಂಡಾದ ಅಕ್ಷರಗಳಲ್ಲಿ ಬರೆದು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.