ಬೆಂಗಳೂರು: ಚುನಾವಣಾ ಪ್ರಚಾರದ ನೆವದಲ್ಲಿ ರೋಡ್ ಶೋ ನಡೆಸುತ್ತಾ ಪೋಸು ಕೊಡುತ್ತಿದ್ದ ರೌಡಿ ಶೀಟರ್ ಸೈಲೆಂಟ್ ಸುನಿಲ್‍ಗೆ ಪೊಲೀಸರು ಶಾಕ್ ನೀಡಿದ್ದಾರೆ. ಸೈಲೆಂಟ್ ಸುನಿಲ್ ವಾಸವಾಗಿರುವ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಪೊಲೀಸರು ರಾಜಕೀಯ ಸಂಗತಿಗಳಿಗೆ ತಲೆ ಹಾಕದಂತೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಕೆಲವು ತಿಂಗಳಿಂದ ಸೈಲೆಂಟ್ ಸುನಿಲ್ ರಾಜಕೀಯವಾಗಿ ಗುರುತಿಸಿಕೊಳ್ಳಲು ಯತ್ನಸುತ್ತಿದ್ದ. ಜನಸೇವಕನ ಫೋಸು ನೀಡಿರುವ ಪೋಸ್ಟರ್‍ಗಳನ್ನು ದೇವಾಲಯಗಳ ಬಳಿ ಪ್ರದರ್ಶಿಸಿದ್ದ. ರಾಮನವಮಿಯದ ದಿನವೂ ಭರ್ಜರಿ ರೋಡ್ ಶೋ ಮೂಲಕ ಪ್ರಚಾರ ಮಾಡಿದ್ದ. ಈ ಬಗ್ಗೆ ವಿವಾದಗಳು ಎದ್ದೇಳುತ್ತಿದ್ದಂತೆಯೇ ತನಗೂ ಸುನಿಲನಿಗೂ ಯಾವುದೇ ಸಂಬಂಧವಿಲ್ಲವೆಂದು ಬಿಜೆಪಿ ಪಕ್ಷ ಹೇಳಿಕೆ ನೀಡಿತ್ತು.
ಈಗ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್, ಸೈಲೆಂಟ್ ಸುನೀಲನನ್ನು ಠಾಣೆಗೆ ಕರೆಸಿ , ಯಾವುದೇ ಅಪರಾಧ ಕೃತ್ಯ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮುಚ್ಚಳಿಕೆ ಬರೆಯಿಸಿಕೊಂಡಿದ್ದು 15 ಲಕ್ಷ ರೂ. ಮೌಲ್ಯದ ಬಾಂಡ್ ಸಹ ಪಡೆಯಲಾಗಿದೆ.