ಮೈಸೂರು : ಮೈಸೂರು ಕೇಂದ್ರ ಕಾರಾಗೃಹದ ಮೇಲೆ ಸೋಮವಾರ ನಗರ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಜೈಲು ಆವರಣದಲ್ಲಿ ಹಣ ಮತ್ತು ಗಾಂಜಾ ಪತ್ತೆಯಾಗಿದೆ.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಆದೇಶದನ್ವಯ, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್ ಮತ್ತು ಅಪರಾಧ – ಸಂಚಾರ ವಿಭಾಗದ ಡಿಸಿಪಿ ಎಸ್. ಜಾಹ್ನವಿ ನೇತೃತ್ವದ ತಂಡ ಕಾರಾಗೃಹದ ಮೇಲೆ ಧಿಡೀರ್ ದಾಳಿ ನಡೆಸಿದ್ದರು. ಪೊಲೀಸ್ ಶ್ವಾನದಳವನ್ನೂ ಈ ವೇಳೆ ಕರೆದೊಯ್ಯಲಾಗಿತ್ತು. ಜೈಲು ಆವರಣದಲ್ಲಿ ಅಕ್ರಮ ವಸ್ತುಗಳು ಪತ್ತೆಯಾಗಿರುವ ಬಗ್ಗೆ ಮಂಡಿ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.