ರೈಸ್‍ಪುಲ್ಲಿಂಗ್ ವಂಚನೆಯ ಪ್ರಕರಣದಲ್ಲಿ ಶಂಕಿತ ಆರೋಪಿಯನ್ನು ಅಕ್ರಮವಾಗಿ ಬಂಧನದಲ್ಲಿರಿಸಿಕೊಂಡು 10 ಲಕ್ಷ ರೂ. ಹಣ ನೀಡದಿದ್ದರೆ ಪ್ರಕರಣ ದಾಖಲಿಸುವುದಾಗಿ ಬ್ಲಾಕ್‍ಮೇಲ್ ಮಾಡಿದ್ದ ಪುಲಕೇಶಿನಗರ ಠಾಣೆಯ ಪಿಎಸ್‍ಐ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸ್ ಇಲಾಖೆ ಕರ್ತವ್ಯದಿಂದ ವಜಾಗೊಳಿಸಿದೆ.
ಪೊಲೀಸ್ ಇನ್ಸ್‍ಪೆಕ್ಟರ್ ರುಮಾನ್ ಪಾಷಾ, ಹೆಡ್ ಕಾನ್ಸ್‍ಟೇಬಲ್ ಗಳಾದ ಲೇಪಾಕ್ಷಪ್ಪ, ಲಕ್ಷ್ಮಣ್ ಮತ್ತು ಜೆಸಿ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‍ಟೇಬಲ್ ಗಿರೀಶ್ ಅಮಾನತಿಗೆ ಒಳಗಾದವರು. ಮಾ. 20 ರಂದು ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಕೊಂಡಯ್ಯ ಎಂಬುವವರನ್ನು ಬಂಧಿಸಿದ್ದ ಈ ನಾಲ್ವರು, ಪ್ರಕರಣವನ್ನೇ ದಾಖಲಿಸಿಕೊಳ್ಳದೇ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಹಣಕ್ಕಾಗಿ ಬ್ಲಾಕ್‍ಮೇಲ್ ಮಾಡಿದ್ದರು. ಬಳಿಕ 10 ಲಕ್ಷ ರೂ. ವಸೂಲಿ ಮಾಡಿ ಬಿಟ್ಟುಕಳಿಸಿದ್ದರು. ಈ ಬಗ್ಗೆ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಕೊಂಡಯ್ಯ ದೂರು ದಾಖಲಿಸಿದ್ದರು. \
ಇತ್ತೀಚಿಗಷ್ಟೇ ಚಿರತೆ ಚರ್ಮ ಮಾರಾಟದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಅಪಹರಿಸಿ ಒತ್ತೆಹಣಕ್ಕೆ ಬೇಡಿಕೆಯಿಟ್ಟು ಮಾರತ್ ಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಅಮಾನತಾಗಿದ್ದರು.