Wednesday, August 19, 2026
Homeಟಾಪ್ ನ್ಯೂಸ್3 ಲಕ್ಷಕ್ಕೆ ನವಜಾತ ಶಿಶುವಿನ ಮಾರಾಟ; ತಾಯಿಯ ಬಂಧನ

3 ಲಕ್ಷಕ್ಕೆ ನವಜಾತ ಶಿಶುವಿನ ಮಾರಾಟ; ತಾಯಿಯ ಬಂಧನ

ತಿರುವನಂತಪುರಂ: ನವಜಾತ ಶಿಶುವನ್ನು 3 ಲಕ್ಷ ರೂ.ಗೆ ಮಾರಾಟ ಮಾಡಿದ ಘಟನೆ ಕೇರಳದ ರಾಜಧಾನಿ ತಿರುವನಂತಪುರದ ಕಂಜಿರಂಕುಲಂನಲ್ಲಿ ನಡೆದಿದೆ.

36 ವರ್ಷದ ಮಹಿಳೆ ತನ್ನ ನವಜಾತ ಶಿಶುವನ್ನು 3 ಲಕ್ಷ ರೂ.ಗೆ ಮಾರಾಟ ಮಾಡಿದ್ದಾಳೆ. ಏಪ್ರಿಲ್ 21 ರಂದು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಯಿಂದ ತಂಪನೂರು ಪೊಲೀಸರಿಗೆ ನವಜಾತ ಶಿಶುವಿನ ಮಾರಾಟದ ಬಗ್ಗೆ ಮಾಹಿತಿ ನೀಡಲಾಗಿದೆ, ಇದಾದ ಕೆಲವೇ ಘಂಟೆಯಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ.

ಏಪ್ರಿಲ್ ಮೊದಲ ವಾರದಲ್ಲಿ ಮಗು ಜನಿಸಿದೆ. ಜನಿಸಿದ ನಾಲ್ಕು ದಿನಗಳ ನಂತರ ಮಹಿಳೆ ತನ್ನ ಮಗುವನ್ನು ಸಮೀಪದ ನಗರದಲ್ಲಿ ವಾಸಿಸುವ ದಂಪತಿಗೆ 3 ಲಕ್ಷ ರೂ.ಗೆ ಮಾರಾಟ ಮಾಡಿದ್ದಾಳೆ. ಭಾನುವಾರ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!