Wednesday, March 11, 2026
Homeಕ್ರೈಂCRIME : ಅಪ್ರಾಪ್ತ ಯುವತಿಯ ಮೇಲೆ ಸಾಮೂಹಿಕ ಅತ್ಯಾ*ಚಾರ - 8 ಆರೋಪಿಗಳು ಅರೆಸ್ಟ್

CRIME : ಅಪ್ರಾಪ್ತ ಯುವತಿಯ ಮೇಲೆ ಸಾಮೂಹಿಕ ಅತ್ಯಾ*ಚಾರ – 8 ಆರೋಪಿಗಳು ಅರೆಸ್ಟ್

ದಕ್ಷಿಣ ಕನ್ನಡ: ಮಂಗಳೂರಲ್ಲಿ (Mangalore) ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ (Crime) ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇನ್‌ಸ್ಟಾಗ್ರಾಮ್ (Instagram) ನಲ್ಲಿ ಅಪ್ರಾಪ್ತ ಯುವತಿಯ ಜೊತೆ ಸ್ನೇಹ ಬೆಳೆಸಿದ್ದ ಯುವಕ ಆ ಬಳಿಕ ಭೇಟಿಯಾಗುವ ನೆಪದಲ್ಲಿ ಫಾಲ್ಸ್ ನೋಡಲು ಹೋಗೋಣವೆಂದು ಆಕೆಯನ್ನು ಕರೆಸಿಕೊಂಡು , ಕಾಡಿನಲ್ಲಿ ಆಕೆಯ ಮೇಲೆ ಸ್ನೇಹಿತರ ಜೊತೆ ಸೇರಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ : ಯುವತಿಯ ಸೋಗಿನಲ್ಲಿ ಫ್ಲರ್ಟ್‌ ಮಾಡುತ್ತಿದ್ದ ಇನ್ಸ್ಟಾ ಆಂಟಿ – ವಿಷಯ ಗೊತ್ತಾದ ಮೇಲೆ ಯುವಕ ಮಾಡಿದ್ದೇನು ಗೊತ್ತಾ?

ಇನ್ನು ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರವೆಸಗಿದ ದೃಶ್ಯವನ್ನು ತನ್ನ ಸ್ನೇಹಿತನ ಮೂಲಕ ವಿಡಿಯೋ ಚಿತ್ರೀಕರಿಸಿ, ಬಳಿಕ ತನ್ನ ಸ್ನೇಹಿತರಿಗೆ ಈ ವಿಡಿಯೋ ಶೇರ್ ಮಾಡಿ..ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ವೈರಲ್ ಮಾಡಿದ್ದಾನೆ ಎನ್ನಲಾಗಿದೆ.

ಕಳೆದ ಜೂನ್ ತಿಂಗಳಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ತನ್ನ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಪ್ರಾಪ್ತ ಯುವತಿ ಬಜಪೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪೋಕ್ಸೋ ಕೇಸ್ ದಾಖಲಿಸಲಾಗಿತ್ತು. ಈ ಪ್ರಕರಣದ ಕಾರ್ಯಾಚರಣೆ ನಡೆಸಿದ ಪೊಲೀಸರು ಸದ್ಯ ಈ ಅತ್ಯಾಚಾರ ಪ್ರಕರಣ ಸಂಬಂಧ ಒಟ್ಟು 8 ಆರೋಪಿಗಳನ್ನು ಬಂಧಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!